Tuesday, June 28, 2022

Latest Posts

ಭದ್ರತಾ ಪಡೆ- ಉಗ್ರರ ನಡುವೆ ಎನ್ ಕೌಂಟರ್: ನಾಲ್ವರು ಉಗ್ರರು ಹತ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕಾಶ್ಮೀರದ ಶೋಪಿಯಾನ್ ಮತ್ತು ಆವಂತಿಪೊರದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಎರಡು ಪ್ರತ್ಯೇಕ ಎನ್ ಕೌಂಟರ್ ಸಂಭವಿಸಿದ್ದು, ನಾಲ್ವರು ಉಗ್ರರು ಹತರಾಗಿದ್ದಾರೆ.

ಗುರುವಾರ ಸಂಜೆ ಶೋಫಿಯಾನ್ ಪಟ್ಟಣದಲ್ಲಿ  ಎನ್ ಕೌಂಟರ್ ನಡೆದಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇನ್ನಿಬ್ಬರು ಶೋಪಿಯಾನ್ ನ ಜಾನ್ ಮೊಹಲ್ಲಾದ ಸ್ಥಳೀಯ ಮಸೀದಿಯೊಳಗೆ ಅಡಗಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುದುವರೆದಿದೆ. ಎನ್ ಕೌಂಟರ್ ನಲ್ಲಿ  ಅಧಿಕಾರಿ ಸೇರಿದಂತೆ ನಾಲ್ವರು ಯೋಧರು  ಗಾಯಗೊಂಡಿದ್ದಾರೆ.

ಶುಕ್ರವಾರ ಮುಂಜಾನೆ ಆವಂತಿಪೊರದಲ್ಲಿ ಎನ್ ಕೌಂಟರ್ ಆರಂಭವಾಗಿದ್ದು, 2-3 ಭಯೋತ್ಪಾದಕರನ್ನು ಸೇನೆ ಸುತ್ತುವರಿದಿದೆ. ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss