ಹೊಸ ದಿಗಂತ ವರದಿ, ಧಾರವಾಡ:
ಶಿವಮೊಗ್ಗ ಸ್ಪೋಟದಿಂದ ಎಚ್ಚೆತ್ತ ಅಧಿಕಾರಿಗಳು, ಜಿಲ್ಲೆಯ ಮುತ್ತಗಿ ಗ್ರಾಮದ ಹತ್ತಿರ ಶಿವಚಂದ್ರನ್ ಸ್ಟೋನ ಮತ್ತು ಕ್ರಶರ್ ಇಂಡಸ್ಟಿ ಕ್ವಾರಿಯಲ್ಲಿದ್ದ ಅಕ್ರಮ ಜಿಲೆಟಿನ್ ಸ್ಪೋಟಕ ವಸ್ತು ವಶಕ್ಕೆ ಪಡೆದ ಘಟನೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.
ಧಾರವಾಡದ ಬಾರಾಕೊಟ್ರಿ ನಿವಾಸಿ ಪ್ರೇಮಾ ವೀರನಗೌಡ ಪಾಟೀಲ(52) ಎಂಬುವರಿಗೆ ಸೇರಿ ಕಡಿ ಕ್ವಾರಿಯಲ್ಲಿ ಅಕ್ರಮ ಜಿಲೆಟಿನ್ ಸಂಗ್ರಹದ ಖಚಿತ ಮಾಹಿತಿ ಮೇರೆಗೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳ ಕಡಿ ಕ್ವಾರಿಯ ಪರಿಶೀಲನೆ ವೇಳೆಯಲ್ಲಿ ಪ್ಲಾಸ್ಟಿಕ್ ಚೀಲ ಹಾಗೂ ರಟ್ಟಿನ ಬಾಕ್ಸ್ಗಳಲ್ಲಿ ಜಿಲೆಟಿನ್ ಕಡ್ಡಿಗಳು ಹಾಗೂ ಡೆಟೋನೇಟರ್ ಸೇರಿದಂತೆ ಸ್ಪೋಟಕ ಸಾಮಗ್ರಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ಶಿವಕುಮಾರ ವೀರನಗೌಡ ಪಾಟೀಲ ಅವರಿಂದ ಆಂತರಿಕ ಭದ್ರತಾ ಅಧಿಕಾರಿ ವರ್ಗ ಒಟ್ಟು 234 ಜಿಲೆಟಿನ್ ಕಡ್ಡಿಗಳು, 675 ಇಲೆಕ್ಟಾನಿಕ್ ಡೆಟೋನೇರಗಳು, ಒಂದು ಮೆಗ್ಗರ್ ಮಷಿನ್, ವಶಕ್ಕೆ ಪಡೆದಿದೆ.
ಈ ಬಗ್ಗೆ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಆಂತರಿಕ ಭದ್ರತಾ ವಿಭಾಗದ ಹು-ಧಾ ಘಟಕದ ಇನ್ಸಪೆಕ್ಟರ್ ಜಯಶ್ರೀ ಮಾನೆ, ಸಹಾಯಕ ಸಬ್ ಇನ್ಸಪೆಕ್ಟರ್ ಎಸ್.ಎಂ.ಹೊಸಮನಿ ಹಾಗೂ ಸಿಬ್ಬಂದಿ ಇದ್ದರು.