ಹೊಸದಿಗಂತ ವರದಿ, ಶಿವಮೊಗ್ಗ:
ಭದ್ರಾವತಿ ಯಲ್ಲಿ ಆರ್ ಎ ಎಫ್ ಘಟಕ ಆರಂಭ ಆಗಿರುವುದು ಕರ್ನಾಟಕ ರಾಜ್ಯದ ಐತಿಹಾಸಿಕ ದಿನ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಭದ್ರಾವತಿಯಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ರಾಜ್ಯದ ಬಹು ವರ್ಷಗಳ ಬೇಡಿಕೆ ಈಡೇರಿಕೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹಿಂದೆ ರಾಜ್ಯದಲ್ಲಿ ವಿಪತ್ತು, ಗಲಭೆ ಸಂಭವಿಸಿದರೆ ಸಿಆರ್ಪಿಎಫ್ ಪ್ರಯಾಣದ ಅವಧಿ ಹೆಚ್ಚಾಗಿ ಬರಿವುದು ವಿಳಂಬ ಆಗುತ್ತಿತ್ತು. ತೆಲಂಗಾಣ ಇತರೆ ಕಡೆಗಳಿಂದ ಆಗಮಿಸಬೇಕಿತ್ತು. ಈಗ ಸಮಸ್ಯೆ ಇರುವುದಿಲ್ಲ ಎಂದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇದು ಮಹತ್ತರ ಮೈಲುಗಲ್ಲು. ಕರ್ನಾಟಕ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲು ಮುಂಚೂಣಿಯಲ್ಲಿದೆ.
ವಲ್ಲಭಬಾಯ್ ಪಟೆಲ್ ನಂತರ ಅಮಿತ್ ಶಾ ಗೃಹ ಮಂತ್ರಿಗಳಾಗಿ ಸಿಕ್ಕಿರುವುದು ನಮ್ಮ ಸೌಭಾಗ್ಯ. ದೇಶಾದ್ಯಂತ ಓಡಾಡಿ ಸಂಘಟಿಸುತ್ತಿದ್ದಾರೆ ಎಂದರು.