ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸುತ್ತದೆ . ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ ಎಂದು ಮೋದಿ ಹೇಳಿದರು.
ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದ ಪ್ರಧಾನಿ, ಮೃತರ ಕುಟುಂಬಕ್ಕೆ ಭಾರತ ಸಾಂತ್ವನ ಹೇಳುತ್ತದೆ ಎಂದು ತಿಳಿಸಿದ್ದಾರೆ.
‘ಜಾಗತಿಕ ಭಯೋತ್ಪಾದನೆ ಪಿಡುಗನ್ನು ಬುಡಸಮೇತ ಕಿತ್ತು ಹಾಕಲು ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ. ಪರಸ್ಪರ ಸಹಕಾರದ ಮೂಲಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾಬವು ಯಶಸ್ಸು ಕಾಣಲಿದ್ದೇವೆ’ ಎಂದು ಪ್ರಧಾನಿ ಮೋದಿ ಈ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳು ಖಂಡನೀಯ , ಭಯೋತ್ಪಾದನೆ ನಿರ್ಮೂಲನೆಗಾಗಿ ಫ್ರಾನ್ಸ್ ಜನತೆ ನಡೆಸುತ್ತಿರುವ ದಿಟ್ಟ ಹೋರಾಟವನ್ನು ಶ್ಲಾಘಿಸಿರುವುದಾಗಿ ಪ್ರಧಾನಿ ಮೋದಿ ಹೇಳಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss