Sunday, June 26, 2022

Latest Posts

ಭರವಸೆಗಳನ್ನು ಈಡೇರಿಸುತ್ತಿರುವ  ಬಿಜೆಪಿ ಸರ್ಕಾರ: ಅಶ್ವತ್ಥನಾರಾಯಣ್ ಗೌಡ

 ಹೊಸ ದಿಗಂತ ವರದಿ, ರಾಮನಗರ:

ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ನೂತನ ಕಾರ್ಯಕರ್ತರಿಗಾಗಿ ನಗರದಲ್ಲಿ ಪ್ರಶಿಕ್ಷಣ ವರ್ಗವನ್ನು ಆಯೋಜಿಸಲಾಗಿತ್ತು. ನಗರದ ರಾಂಘಡ್ ಪಾರ್ಟಿ ಹಾಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ್ ಗೌಡರು ಮಾತನಾಡಿ, ೨೦೧೪ರಿಂದೀಚೆಗೆ ಭಾರತದಲ್ಲಿ ಬದಲಾದ ಭಾರತ ವಿಚಾರದಲ್ಲಿ ಮಾತನಾಡಿದರು.
೨೦೧೪ರಲ್ಲಿ ತಮ್ಮ ಪಕ್ಷ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದ ನಂತರ ಭಾರತ ಸಾಕಷ್ಟು ವಿಷಯಗಳಲ್ಲಿ ಬದಲಾಗಿದೆ. ಜನರ ಜೀವನ ಮಟ್ಟ ಸುಧರಿಸುತ್ತಿದೆ. ರಾಜಕೀಯ ಬದಲಾಗಿದೆ. ಜನರಿಗೆ ಬೇಕಾದ ವಿಚಾರಗಳನ್ನೇ ಪಕ್ಷದ ಸರ್ಕಾರಗಳು ಅಳವಡಿಸಿಕೊಂಡಿವೆ. ಹೀಗಾಗಿಯೇ ಜನರು ಮತ್ತೆ ಬಿಜೆಪ ಸರ್ಕಾರವನ್ನೇ ಆರಿಸಿಕೊಂಡಿದ್ದಾರೆ ಎಂದರು.
ಚುನಾವಣೆಗಳ ಸಂದರ್ಭದಲ್ಲಿ ಭರವಸೆಗಳನ್ನು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಈಡೇರಿಸುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಭಾರತೀಯರ ಕನಸಾಗಿತ್ತು. ಅದೀಗ ನನಸಾಗುತ್ತಿದೆ. ಜಮ್ಮು ಕಾಶ್ವೀರದಲ್ಲಿ ೩೭೦ (೩೫)ನೇ ವಿಧಿ ತೆರವು ಹೀಗೆ ಒಂದೊoದೆ ಭರವಸೆಗಳನ್ನು ಈಡೇರಿಸಲಾಗುತ್ತಿದೆ ಎಂದರು. ಕಾಂಗ್ರೆಸ್, ಜನತಾದಳ ಪಕ್ಷಗಳು ಹೋಳಾಗಿ ಅನೇಕ ಪಕ್ಷಗಳು ಹುಟ್ಟಿಕೊಂಡಿವೆ. ಆದರೆ ಜನಸಂಘದಿoದ ಭಾರತೀಯ ಜನತಾಪಕ್ಷವಾಗಿ ಒಗ್ಗಟ್ಟಿನಲ್ಲಿ ನಡೆಯುತ್ತಿದೆ ಎಂದು ಅವರು ಭಾಜಪ ಮತ್ತು ಅನ್ಯ ಪಕ್ಷಗಳ ಸಿದ್ದಾಂತಗಳು, ಬದ್ದತೆಯ ಬಗ್ಗೆ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ಜಿಲ್ಲಾ ಭಾಜಪ ಕಾರ್ಯದರ್ಶಿ ರುದ್ರದೇವರು ನಮ್ಮ ವಿಚಾರ-ನಮ್ಮ ಪರಿವಾರ ಎಂಬ ವಿಷಯದಲ್ಲಿ , ಜಿಲ್ಲಾ ಮಾಧ್ಯಮ ಪ್ರಮುಖ್ ಚಂದ್ರಶೇಖರ ರೆಡ್ಡಿಯವರು ಸಾಮಾಜಿಕ ಜಾಲ ತಾಣ ಮತ್ತು ಉಪಯೋಗ, ನಾಗರಾಜ್ ಎಂಬುವರು ಪಕ್ಷದ ವಿಚಾರಧಾರೆಗಳ ಬಗ್ಗೆ, ರಾಮಚಂದ್ರ ಅವರು ಬಿಜೆಪಿ ನಡೆದು ಬಂದ ದಾರಿಯ ಬಗ್ಗೆ, ಕೆಂಗೇರಿ ಸುರೇಶ್ ಅವರು ಆತ್ಮ ನಿರ್ಭರ ಭಾರತ ಮತ್ತು ಭಾರತದ ರಕ್ಷಣಾ ಸಾಮಾರ್ಥ್ಯದ ಬಗ್ಗೆ, ಸತೀಷ್ ಅವರು ನಮ್ಮ ಪರಂಪರೆ ಎಂಬ ವಿಷಯದಲ್ಲಿ ಮತ್ತು ತಾ.ನ.ಮಹೇಶ್ ಅವರು ವ್ಯಕ್ತಿತ್ವ ವಿಕಸನದ ಬಗ್ಗೆ ಮಾತನಾಡಿದರು. ಈ ವೇಳೆ ನಗರ ಬಿಜೆಪಿ ಮಂಡಲದ ಅಧ್ಯಕ್ಷ ಪಿ.ಶಿವಾನಂದ, ಪ್ರಧಾನ ಕಾರ್ಯದರ್ಶಿ ಡಿ ನರೇಂದ್ರ ಹಾಗೂ ಜೆ ದರ್ಶನ್, ನಗರ ಉಪಾಧ್ಯಕ್ಷ ಜಯಣ್ಣ, ಯಶವಂತ್ ರಾವ್, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ನಗರ ಘಟಕದ ಮಹಿಳಾ ಮೋರ್ಚಾ ಅಧ್ಯಕ್ಷ ಪುಷ್ಪಲತಾ, ಜೈಶೀಲಾ, ಕಾರ್ಯಕರ್ತರಗಳಾದ ಬಿ ದೇವರಾಜು ಚನ್ನಪ್ಪ, ಸಿದ್ದು, ಸಿದ್ದಲಿಂಗ ಸ್ವಾಮಿ ಮುಂತಾದವರು ಹಾಜರಿದ್ದರು. ಪ್ರಶಿಕ್ಷಣ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಭಾರತ ಮಾತ, ಪಂಡಿತ್ ದೀನ್ ದಯಾಳ್, ಶ್ಯಾಂ ಪ್ರಸಾದ್ ಮುಖರ್ಜಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss