Wednesday, August 10, 2022

Latest Posts

ಭರ್ಜರಿ ಸಕ್ಸಸ್ ಕಾಣ್ತಿದೆ ಜಪಾನ್ ಅಂಗಳದಲ್ಲಿ ಭಾರತದ ‘ಮಿಷನ್ ಮಂಗಳ’!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಭಾರತದ ‘ಮಂಗಲ ಯಾನ’ ಇದೀಗ ಜಪಾನ್ ಅಂಗಳ ತಲುಪಿದ್ದು, ಅಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ!
ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ಕನ್ನಡದ ದತ್ತಣ್ಣ ಮೊದಲಾದವರ ತಾರಾಗಣವಿರುವ  ’ಮಿಷನ್ ಮಂಗಲ್’ ಸಿನಿಮಾ ಈಗ ಜಪಾನ್‌ಭಾಷೆಯಲ್ಲಿ ತಯಾರಾಗಿ ಜಪಾನ್‌ನಲ್ಲಿ ಜ.೮ರಂದು ತೆರೆಕಂಡಿದ್ದು, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಲಭಿಸಿದೆ. ಜೊತೆಗೆ ಗಳಿಕೆಯಲ್ಲಿಯೂ ದಾಖಲೆ ಬರೆದಿದೆ.
ತರಣ್ ಆದರ್ಶ್ ಮಾಡಿರುವ ಟ್ವೀಟ್‌ನ ಮಾಹಿತಿಯಂತೆ, ಮಿಷನ್ ಮಂಗಲ್ ಸಿನಿಮಾ ಜಪಾನ್‌ನ ಸುಮಾರು ೪೦ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದುವರೆಗೆ ರೂ. ೨೯.೨೪ ಲಕ್ಷ ಗಳಿಕೆ ಕಂಡಿದೆಯಂತೆ.
ಕೊರೊನಾದಿಂದ ಕಂಗಾಲಾಗಿದ್ದ ಜಪಾನ್‌ನಲ್ಲಿ ಈಗಷ್ಟೇ ಚಿತ್ರಮಂದಿರಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ನಡುವೆ ಭಾರತೀಯ ಚಿತ್ರವೊಂದು ಪ್ರಸಿದ್ಧಿಗೊಂಡಿರುವುದು ಹೊಸ ದಾಖಲೆಯಾಗಿದೆ.
‘ಮಿಷನ್ ಮಂಗಳ್‘ ೨೦೧೯ರ ಆಗಸ್ಟ್ ತಿಂಗಳಲ್ಲಿ ವರ್ಲ್ಡ್ ವೈಡ್ ರಿಲೀಸ್ ಆಗಿತ್ತು. ೩೨ ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ  ೨೯೦ ಕೋಟಿಗೂ ಹೆಚ್ಚು ಹಣ ಗಳಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss