ಉತ್ತರ ಕನ್ನಡ: ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದ್ದ ಮಿಣಿ ಮಿಣಿ ಪೌಡರ್ ಇದೀಗ ಯಕ್ಷಗಾನದಲ್ಲೂ ಬಳಕೆಯಾಗಿದ್ದು, ಪ್ರೇಕಕ್ಷಕರಿಗೆ ನಗುವಿನ ರಸದೌತಣ ನೀಡಿದೆ.
ಅಂಕೋಲಾದ ನೀಲಂಪುರಂ ನಲ್ಲಿ ನಡೆದ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯ ಪಾತ್ರ ಮಾಡಿದ ಕಲಾವಿದರೊಬ್ಬರು ಹೇಳಿದ ಮಿಣಿ ಮಿಣಿ ಭಸ್ಮಾ ಸಂಭಾಷಣೆಯ ವಿಡಿಯೋ ವಾಟ್ಸಾಪ್ ಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಯಕ್ಷಗಾನದ ಪ್ರಸಂಗವವೊಂದರಲ್ಲಿ ಭಸ್ಮಾಸುರ ಮತ್ತು ಹಾಸ್ಯ ಪಾತ್ರಧಾರಿ ವೇದಿಕೆಯಲ್ಲಿದ್ದರು. ಈ ವೇಳೆ ಭಸ್ಮಾಸುರನಿಗೆ ಈಶ್ವರನು ನೀಡಿದ ಉರಿಶಾಪದ ಬಗ್ಗೆ ಸಂಭಾಷಣೆ ನಡೆಯುತ್ತಿರುತ್ತದೆ. ಆಗ ಭಸ್ಮಾಸುರನೇ ನಿನ್ನ ಎದುರಿಗೆ ಬಂದರೆ ಏನು ಮಾಡುತ್ತೀಯ ಎಂದು ಕೇಳಿದಾಗ, ಹಾಸ್ಯ ಪಾತ್ರಧಾರಿ ನನಗೆ ಯಾವುದೇ ಭಯವಿಲ್ಲ, ನನ್ನಪ್ಪ ನನಗೆ ಮಿಣಿ ಮಿಣಿ ಭಸ್ಮ ಕೊಟ್ಟಿದ್ದಾನೆ. ಅದನ್ನು ಪ್ರಯೋಗಿಸುತ್ತೇನೆ ಎನ್ನುತ್ತಾನೆ. ಇದು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು.