Wednesday, August 10, 2022

Latest Posts

ಭಾಗಮಂಡಲದಲ್ಲಿ ದಾಖಲೆಯ 486 ಮಿ.ಮೀ.ಮಳೆ, ಜಿಲ್ಲೆಯ ಮೂರು ಕಡೆ ಪರಿಹಾರ ಕೇಂದ್ರ ಸ್ಥಾಪನೆ : 48 ಮಂದಿಗೆ ಆಶ್ರಯ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭಾಗಮಂಡಲದಲ್ಲಿ ಒಂದೇ ದಿನದಲ್ಲಿ ದಾಖಲೆಯ 486 ಮಿ.ಮೀ.ಮಳೆ ದಾಖಲಾಗಿದೆ.
ಜಿಲ್ಲೆಯ ಮೂರು ಭಾಗಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 20 ಕುಟುಂಬದ 48 ಜನರಿಗೆ ಆಶ್ರಯ ನೀಡಲಾಗಿದೆ. ಭಾಗಮಂಡಲದ ಕೆ.ವಿ.ಜಿ ಕಾಲೇಜಿನಲ್ಲಿ ಒಂದು ಕುಟುಂಬದ 3 ಜನರು,ಕರಡಿಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 17 ಕುಟುಂಬದ 40 ಜನರು, ವೀರಾಜಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2 ಕುಟುಂಬದ 5 ಜನರು ಆಶ್ರಯ ಪಡೆದಿದ್ದಾರೆ. ಈ ಕೇಂದ್ರಗಳಲ್ಲಿ ಆಹಾರ ಸೇರಿದಂತೆ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸ್ಥಳಾಂತರಕ್ಕೆ ನಿರ್ದೇಶನ : ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚುತ್ತಿರುವುದರಿಂದ ವೀರಾಜಪೇಟೆಯ್ಯ ಅಯ್ಯಪ್ಪ ಬೆಟ್ಟ, ನೆಹರೂ ನಗರ ಸೇರಿದಂತೆ ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಕೊಡಗು ಜಿಲ್ಲೆಯ ಮಳೆ ವಿವರ : ಜಿಲ್ಲೆಯಲ್ಲಿ ಗರುವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 177.07 ಮಿ.ಮೀ.ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 176, ನಾಪೋಕ್ಲು 214.20, ಸಂಪಾಜೆ 78.20, ವೀರಾಜಪೇಟೆ ಕಸಬಾ 140, ಹುದಿಕೇರಿ 165, ಶ್ರೀಮಂಗಲ 142, ಪೊನ್ನಂಪೇಟೆ 245, ಅಮ್ಮತ್ತಿ 61.50, ಬಾಳೆಲೆ 190, ಸೋಮವಾರಪೇಟೆ ಕಸಬಾ 140.60, ಶನಿವಾರಸಂತೆ 120, ಶಾಂತಳ್ಳಿ 255.20, ಕೊಡ್ಲಿಪೇಟೆ 165.80, ಕುಶಾಲನಗರ 46.60, ಸುಂಟಿಕೊಪ್ಪ 83 ಮಿ.ಮೀ.ಮಳೆಯಾಗಿದೆ.
ಅದರಂತೆ ಮಡಿಕೇರಿ ತಾಲೂಕಿನಲ್ಲಿ ಸರಾಸರಿ 238.75 ಮಿ.ಮೀ.ವೀರಾಜಪೇಟೆ ತಾಲೂಕಿನಲ್ಲಿ 157.25 ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 135.20 ಮಿ.ಮೀ.ಮಳೆಯಾದ ಬಗ್ಗೆ ವರದಿಯಾಗಿದೆ.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಗುರುವಾರ ಜಲಾಶಯದ ನೀರಿನ ಮಟ್ಟವನ್ನು 2855.16 ಅಡಿಗಳಿಗೆ ಕಾಯ್ದಿರಿಸಿಕೊಂಡು ಜಲಾಶಯದಿಂದ ನದಿಗೆ 11,811 ಕ್ಯುಸೆಕ್ ಹಾಗೂ ನಾಲೆಗೆ 300 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2835.16 ಅಡಿ ನೀರು ಸಂಗ್ರಹವಾಗಿದ್ದರೆ, ನದಿಗೆ 1400 ಹಾಗೂ ನದಿಗೆ 700 ಕ್ಯುಸೆಕ್ ನೀರನ್ನು ಹೊರಬಿಡಲಾಗಿತ್ತು.
ಪ್ರಸಕ್ತ ಜಲಾಶಯಕ್ಕೆ 9081 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 2559 ಕ್ಯುಸೆಕ್‍ನಷ್ಟಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss