ಮಡಿಕೇರಿ: ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಭಾನುವಾರ ದಂಪತಿ ಸಹಿತ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಭಗಂಡೇಶ್ವರ, ಗಣಪತಿ, ಸುಬ್ರಮಣ್ಯ ಮತ್ತು ಮಹಾವಿಷ್ಣು ದೇವರ ಗುಡಿಯಲ್ಲಿ ವಿ.ಸೋಮಣ್ಣ ಮತ್ತು ಸಚಿವರ ಧರ್ಮಪತ್ನಿ ಶೈಲಜಾ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಶಾಸಕ ಕೆ.ಜಿ ಬೋಪಯ್ಯ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಸದಸ್ಯರಾದ ಡಾ.ಕಾವೇರಪ್ಪ, ತಹಶಿಲ್ದಾರ್ ಮಹೇಶ್, ಡಿವೈಎಸ್ಪಿ ದಿನೇಶ್ ಕುಮಾರ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಮತ್ತಿತರರು ಇದ್ದರು.ಬಳಿಕ ಸಚಿವರು ತಲಕಾವೇರಿ ಕ್ಷೇತ್ರಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.