ಹೊಸದಿಲ್ಲಿ: ಭಾನುವಾರದಂದು (ಮೇ 17) ದೇಶದಲ್ಲಿ ಲಾಕ್ಡೌನ್ 3.0 ಮುಕ್ತಾಯವಾಗಲಿದ್ದು, ನಾಲ್ಕನೆ ಅವಧಿಯ ನಿರ್ಬಂಧ ಜಾರಿ ಬಗ್ಗೆ ರಾಜ್ಯಗಳೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಮೂರು ದಿನಗಳ ಹಿಂದೆಯಷ್ಟೆ ಪ್ರಧಾನಿ ನರೇಂದ್ರ ಮೋದಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂಭಾಷಣೆ ನಡೆಸಿದ್ದು ಈ ಸಂದರ್ಭದಲ್ಲಿ ಸಾರ್ವತ್ರಿಕ ಸಾರಿಗೆ ಮತ್ತು ವಲಯಗಳ ವರ್ಗೀಕರಣ ಮೊದಲಾದ ವಿಷಯಗಳನ್ನು ಗಂಭೀರವಾಗಿ ಚರ್ಚಿಸಲಾಗಿದೆ.
ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳ ವರ್ಗೀಕರಣವನ್ನು ಆಯಾ ರಾಜ್ಯಗಳೇ ಮಾಡಬೇಕು. ಮಿಗಿಲಾಗಿ ಸಾರ್ವಜನಿಕ ಸಾರಿಗೆ ಬಗ್ಗೆ ಕೂಡಾ ರಾಜ್ಯಗಳೇ ಸನ್ನಿವೇಶಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರ ತನ್ನ ಒಪ್ಪಿಗೆ ನೀಡಿದೆ.
ಮಹಾರಾಷ್ಟç, ತಮಿಳುನಾಡು ಮತ್ತು ಆಂಧ್ರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ರಾಜ್ಯಗಳಲ್ಲಿ ಬಸ್, ರೈಲು ಹಾಗೂ ವಿಮಾನ ಸಂಚಾರ ಸದ್ಯಕ್ಕೆ ಬೇಡ. ಲಾಕ್ಡೌನ್ ಅವಧಿ ಮತ್ತಷ್ಟು ದಿನ ಮುಂದುವರಿಯಲಿ ಎಂದು ಮುಖ್ಯಮಂತ್ರಿಗಳಾದ ಕೆ. ಸಿ.ಚಂದ್ರಶೇಖರರಾವ್, ಜಗನ್ಮೋಹನ್ರೆಡ್ಡಿ, ಉದ್ದವ್ ಠಾಕರೆ ಹಾಗೂ ಪಳನಿಸ್ವಾಮಿ ಕೇಂದ್ರದ ಗಮನಸೆಳೆದಿದ್ದಾರೆ.