Wednesday, August 10, 2022

Latest Posts

ಭಾನುವಾರ ಸಂಪೂರ್ಣ ಲಾಕ್ ಡೌನ್: ಮಾಂಸದಂಗಡಿ ಓಪನ್, ಮದ್ಯದಂಗಡಿ ಬಂದ್!

ಬೆಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನಲೆ ರಾಜ್ಯ ಸರ್ಕಾರ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಆದೇಶಿಸಿದೆ.

ನಾಳೆ(ಮೇ 24) ಭಾನುವಾರ ಅಗತ್ಯ ಸೇವೆ ಹೊರತು ಪಡಿಸಿ ಬೇರೆ ಯಾವುದೇ ಚಟುವಟಿಕೆಗಳಿಗೂ ಸರ್ಕಾರ ಅನುಮತಿ ನೀಡಿಲ್ಲ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಬೇರೆ ಎಲ್ಲಾ ಸೇವೆಗಳ ಮೇಲೆ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಆದೇಶಿಸಿದೆ.

ಪೂರ್ವ ನಿಗದಿತ ಮದುವೆ ಸಮಾರಂಭ ಹೊರತು ಪಡಿಸಿ ರಾಜ್ಯದಲ್ಲಿ ಬೇರೆಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ. ನಾಳೆ ಯಾವುದೇ ಸಭೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ.

ಅಗತ್ಯ ಸೇವೆಗಳಾದ ಹಾಲು, ತರಕಾರಿ, ಹಣ್ಣು ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ.

ಸಾರ್ವಜನಿಕರಿಗೆ ಕೆಎಸ್ ಆರ್ ಟಿಸಿ ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಆಟೋ, ಟ್ಯಾಕ್ಸಿ ಬ್ಯೂಟಿ ಪಾರ್ಲರ್, ಪಾರ್ಕ್, ಗ್ಯಾರೇಜ್ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿದೆ.

ಮಾಂಸ ಪ್ರಿಯರಿಗೆ ಮಾಂಸದಂಗಡಿ ಓಪನ್ ಮಾಡಲು ಅವಕಾಶ ನೀಡಿದೆ. ಲಾಕ್ ಡೌನ್ ಸಡಿಲಿಕೆ ವೇಳೆಯಲ್ಲಿ ಸರ್ಕಾರ ಭಾನುವಾರಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡುವುದಾಗಿ ಆದೇಶಿಸಿದ್ದು, ಶನಿವಾರ(ಮೇ.23) ರಾತ್ರಿ 7 ಗಂಟೆಯಿಂದ ಸೋಮವಾರ(ಮೇ 25) ಬೆಳಗ್ಗೆ 7 ಗಂಡೆಯವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss