Thursday, August 11, 2022

Latest Posts

ಭಾರತಕ್ಕೆ ಚೀನಾದ ರಫ್ತು ಶೇ. 24.7 ರಷ್ಟು ಕುಸಿತ: ಚೀನಾಕ್ಕೆ ಭಾರತದ ರಫ್ತು ಶೇ.6.7 ರಷ್ಟು ಏರಿಕೆ!

ಹೊಸದಿಲ್ಲಿ: ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಆಕ್ರಮಣ ಮಾಡಿದ ನಂತರ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಕಾರ್ಯದಲ್ಲಿ ಭಾರತ ಮುಂದಾಗಿದ್ದು, ಜನವರಿಯಿಂದ ಭಾರತಕ್ಕೆ ಚೀನಾದ ರಫ್ತು ವರ್ಷಕ್ಕೆ ಶೇ.24.7 ರಷ್ಟು ಇಳಿಕೆಯಾಗಿದೆ. ಅಂದರೆ ಬರೋಬ್ಬರಿ 32.28 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಚೀನಾದ ಕಸ್ಟಮ್ಸ್ ಡೇಟಾ ವರದಿ ಮಾಡಿದೆ.

ಹೀಗೆ ಉಭಯ ದೇಶಗಳ ನಡುವಿನ ಒಟ್ಟು ವ್ಯಾಪಾರವನ್ನು 43.47 ಬಿಲಿಯನ್ ಡಾಲರ್‌ಗೆ ಇಳಿಸಲಾಗಿದೆ. ಇದು ಶೇ.18.6 ರಷ್ಟು ಕುಸಿದಿದೆ.  ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾದ ಅತಿದೊಡ್ಡ ಹೊಡೆತವಾಗಿದ್ದು, ಮಾರುಕಟ್ಟೆಯ ತನ್ನ ಶೇ. 81ರಷ್ಟು ಪಾಲಿನಿಂದ ಶೇ.72 ಕ್ಕೆ ಕುಸಿದಿದೆ.

ಭಾರತದಿಂದ ಚೀನಾಕ್ಕೆ ರಫ್ತು ಮಾಡಿದ್ದು, ಜನವರಿಯಿಂದ ಶೇ.6.7 ರಷ್ಟು ಏರಿಕೆ ಕಂಡು 11.09 ಬಿಲಿಯನ್ ಡಾಲರ್‌ಗೆ ಏರಿದೆ. ಜೂನ್‌ನಲ್ಲಿ ಚೀನಾ ಭಾರತದಿಂದ 27,207 ಮೀಟರ್ ಪಿವಿಸಿಯನ್ನು ಆಮದು ಮಾಡಿಕೊಂಡಿದೆ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಭಾರತವು ಪಿವಿಸಿ ರಫ್ತು ವೇಗವನ್ನು ಹೆಚ್ಚಿಸಿದ್ದರಿಂದ ಮೇ ತಿಂಗಳಲ್ಲಿ ದಾಖಲಾದ 5,174 ಮೀಟರ್‌ಗೆ ಹೋಲಿಸಿದರೆ ಐದು ಪಟ್ಟು ಹೆಚ್ಚು.

ಕೇಂದ್ರ ಸರ್ಕಾರ ಚೀನಾ ವಸ್ತುಗಳ ಆಮದು ಪಟ್ಟಿಯನ್ನು ಪರಿಶೀಲನೆ ನಡೆಸುತ್ತಿದೆ, ಬದಲಿಗೆ ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಸ್ಥಳೀಯ ಕೈಗಾರಿಕೆಗಳಿಂದ ಸರಬರಾಜು ಮಾಡಬಹುದು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss