Wednesday, August 17, 2022

Latest Posts

ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ

ಹೊಸದಿಲ್ಲಿ: ಕೊರೋನಾ ವೇಳೆಯಲ್ಲಿ ವಿಶ್ವಕ್ಕೆ ಬೆಂಬಲವಾಗಿರುವ ಭಾರತಕ್ಕೆ ಶ್ರೀಲಂಕಾ ಪ್ರಧಾನಿ ಮಹಿದಾ ರಾಜಪಕ್ಸೆ ಕೃತಜ್ಞತೆ ಸಲ್ಲಿಸಿದರು.
ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಮಾರಕವಾಗಿರುವ ವೇಳೆಯಲ್ಲಿ ವಿಶ್ವದಾದ್ಯಂತ ಜನರಿಗೆ ಬೆಂಬಲ ನೀಡಿರುವ ಭಾರತಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಶ್ರೀಲಂಕಾದ ಪ್ರಧಾನಿ ವರ್ಚುವಲ್ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಮಹಿದಾ ರಾಜಪಕ್ಸೆ ಹೇಳಿದರು.
ಭಾರತೀಯ ನೌಕಾಪಡೆ ಇತ್ತೀಚೆಗೆ ನಡೆಸಿದ ರಕ್ಷಣಾ ಕಾರ್ಯಾಚರಣೆಯ ಕುರಿತು ಮಾತನಾಡಿದ ಅವರು, ಎಂಟಿ ನ್ಯೂ ಡೈಮಂಡ್ ಹಡಗಿನಲ್ಲಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯು ಉಭಯ ದೇಶಗಳ ನಡುವೆ ಹೆಚ್ಚಿನ ಸಹಕಾರಕ್ಕೆ ಅವಕಾಶವನ್ನು ಒದಗಿಸಿದೆ ಎಂದು ರಾಜಪಕ್ಸೆ ಹೇಳಿದರು.
ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧಗಳು ಸಾವಿರಾರು ವರ್ಷಗಳಷ್ಟು ಹಳೆಯದಾಗಿದ್ದು, ನಮ್ಮ ಸರ್ಕಾರದ ನೆರೆಹೊರೆಯ ಮೊದಲ ನೀತಿ ಮತ್ತು ಸಾಗರ್ ಸಿದ್ಧಾಂತದ ಪ್ರಕಾರ, ಶ್ರೀಲಂಕಾಕ್ಕೆ ನಾವು ವಿಶೇಷ ಆದ್ಯತೆ ನೀಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಬೌದ್ಧ ಧರ್ಮದ ಸಂಬಂದಗಳ ಉತ್ತೇಜನೆಗೆ ಶ್ರೀಲಂಕಾಕ್ಕೆ ಭಾರತದಿಂದ 15 ಮಿಲಿಯನ್ ಡಾಲರ್ ನೆರವು ನೀಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!