ಭಾರತದಲ್ಲಿ ಕೊರೋನಾಗೆ 8ನೇ ಬಲಿ: ಸೋಂಕಿತರ ಸಂಖ್ಯೆ 400ಕ್ಕೆ ಏರಿಕೆ

0
98

ಮುಂಬೈ: ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಇಂದು ಮುಂಬೈನ 68 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದು ಫಿಲಿಪ್ಪಿನ್ಸ್ ನ 68 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಇದೀಗ ದೇಶದಲ್ಲಿ ಕೊರೋನಾ ಸೋಂಕಿಗೆ 8ನೇ ಬಲಿಯಾಗಿದ್ದು, ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 400ಕ್ಕೆ ಏರಿಕೆಯಾಗಿದೆ.

ಕೊರೋನಾ ಭಾರತದಲ್ಲಿ ಮರಣ ಮೃದಂಗ ಬಾರಸಲು ಮುಂದಾಗಿದ್ದು, ಮಹರಾಷ್ಟ್ರದಲ್ಲಿ 15 ಹೊಸ ಪ್ರಕರಣಗಳು ಹೊರಬಂದಿದ್ದು, ಅವರಲ್ಲಿ ಸೋಂಕು ದೃಡಪಟ್ಟಿದೆ. ಮಹರಾಷ್ಟ್ರದಲ್ಲಿ ಈವರೆಗೂ 89 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 24 ಗಂಟೆಗಳಲ್ಲಿ 15 ಪ್ರಕರಣಗಳು ದಾಖಲಾಗಿದೆ.ಇದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ 400ಕ್ಕೆ ಏರಿಕೆಯಾಗಿದೆ.

 

LEAVE A REPLY

Please enter your comment!
Please enter your name here