ಹೊಸದಿಲ್ಲಿ: ಇಡೀ ವಿಶ್ವದಲ್ಲಿ ಮೊಬೈಲ್ ಬಳಕೆ ಒಂದು ಸರ್ವೇ ಸಾಮಾನ್ಯವಾಗಿದೆ. ಆದರೆ ಮೊಬೈಲ್ ಬಳಕೆಯಿಂದ ಮಾನುಷ್ಯರಿಗೆ ಅಪಾಯತರುವ ರೇಡಿಯೇಷನ್ಸ್ ಗಳನ್ನು ತಡೆಯಲು ಭಾರತದಲ್ಲಿ ವಿನೂತನ ಚಿಪ್ ತಯಾರಿಸಲಾಗಿದೆ.
ರಾಷ್ಟ್ರೀಯ ಕಾಮಧೇನು ಆಯೋಗ್ (ಆರ್ಕೆಎ) ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಅವರು ಗೋವಿನ ಸಗಣಿಯಿಂದ ತಯಾರಿಸಿದ ‘ಚಿಪ್’ ಅನ್ನು ಅನಾವರಣಗೊಳಿಸಿದರು ಮತ್ತು ಇದು ಮೊಬೈಲ್ ಹ್ಯಾಂಡ್ಸೆಟ್ಗಳಿಂದ ರೇಡಿಯೇಷನ್ಸ್ ಕಡಿಮೆ ಮಾಡುತ್ತದೆ ಮತ್ತು ಇದು ರೋಗಗಳ ವಿರುದ್ಧದ ರಕ್ಷಣೆಯಾಗಿದೆ ಎಂದು ಹೇಳಿದ್ದಾರೆ.
ಹಸುವಿನ ಉತ್ಪನ್ನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ರಾಷ್ಟ್ರವ್ಯಾಪಿ ಅಭಿಯಾನ ‘ಕಾಮಧೇನು ದೀಪಾವಳಿ ಅಭಿಯಾನ್’ ಪ್ರಾರಂಭದ ಸಂದರ್ಭದಲ್ಲಿ ಮಾತನಾಡಿದ ಕಥೀರಿಯಾ, ಹಸು ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ. ಇದು ಕೆಟ್ಟ ರೇಡಿಯೇಯಷನ್ಸ್ ವಿರುದ್ಧ ಕೆಲಸ ಮಾಡುತ್ತದೆ ಹಾಗೂ ಇದು ವೈಜ್ಞಾನಿಕವಾಗಿ ಸಾಬೀತು ಪಡಿಸಲಾಗಿದೆ ಎಂದರು.
ಸಗಣಿಯಿಂದ ತಯಾರಿಸಿರುವ ಚಿಪ್ ಅನ್ನಯ ಮೊಬೈಲ್ ಫೋನ್ಗಳಲ್ಲಿ ಬಳಸಲು ವಿನೂತನವಾಗಿ ವಿನ್ಯಾಸ ಮಾಡಲಾಗಿದೆ. ಗೌಸತ್ವ ಕವಾಚ್ ಹೆಸರಿನ ‘ಚಿಪ್’ ಅನ್ನು ರಾಜ್ಕೋಟ್ ಮೂಲದ ಶ್ರೀಜಿ ಗೋಶಲಾ ತಯಾರಿಸಿದ್ದಾರೆ.
2019 ರಲ್ಲಿ ಸ್ಥಾಪನೆಯಾದ ಆರ್ಕೆಎ ಹಸುಗಳ ಸಂರಕ್ಷಣೆ, ರಕ್ಷಣೆ ಮತ್ತು ಅಭಿವೃದ್ಧಿ ಮತ್ತು ಅವುಗಳ ಸಂತತಿಯನ್ನು ಗುರಿಯಾಗಿರಿಸಿಕೊಂಡಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವ್ಯಾಪ್ತಿಗೆ ಬರುವ ಆಯೋಗ್ ಹಬ್ಬದ ಸಮಯದಲ್ಲಿ ಗೋವು ಆಧಾರಿತ ಉತ್ಪನ್ನಗಳನ್ನು ಬಳಸುವುದನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ.