ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತದಲ್ಲಿ ಬ್ರಿಟನ್ ಕೊರೋನಾ ರೂಪಾಂತರ ಸೋಂಕಿಗೆ ಒಳಗಾದವರ ಸಂಖ್ಯೆ ಏರಿಕೆಯಾಗಿದ್ದು, ಬುಧವಾರ ಒಟ್ಟು 102 ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಬುಧವಾರ ದೇಶದಲ್ಲಿ ಕೊರೋನಾ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿರುವ ಸಚಿವಾಲಯ, ಬ್ರಿಟನ್ ರೂಪಾಂತರ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಸಕ್ರಿಯ ಪ್ರಕರಣಗಳು ತಗ್ಗಿವೆ. 2.14 ಲಕ್ಷಕ್ಕೆ ಇಳಿದಿದೆ ಎಂದು ತಿಳಿಸಿದೆ. 197 ದಿನಗಳಲ್ಲಿಯೇ ಕಡಿಮೆ ಸಕ್ರಿಯ ಪ್ರಕರಣ ಕಂಡುಬಂದಿದೆ. ಸಕ್ರಿಯ ಪ್ರಕರಣಗಳ ಪ್ರಮಾಣವು 2.04%ಗೆ ಇಳಿದಿದೆ. ಇದರೊಂದಿಗೆ 81.83% ಚೇತರಿಕೆ ಪ್ರಮಾಣ ದಾಖಲಿಸಿರುವುದಾಗಿ ತಿಳಿಸಿದೆ.
ಜನವರಿ 11ರವರೆಗೆ ದೇಶದಲ್ಲಿ ರೂಪಾಂತರ ಸೋಂಕಿತರ ಸಂಖ್ಯೆ 96 ಇದ್ದು, ಬುಧವಾರದವರೆಗೆ 102ಕ್ಕೆ ಏರಿಕೆಯಾಗಿದೆ.