ಹೊಸದಿಲ್ಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 73,272 ಹೊಸ ಕೊರೋನಾ ಸೋಂಕಿನ ಪ್ರರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಇದರಿಂದ ದೇಶದಲ್ಲಿ ಒಟ್ಟು ಸೋಂಕಿತರು 69,79,424 ಸೋಂಕಿತರು ದಾಖಲಾಗಿದ್ದು, ಇವರಲ್ಲಿ 8,83,185 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತದಲ್ಲಿನ ಒಟ್ಟು ಸೋಂಕಿತರಲ್ಲಿ ಶೇ.85.80ರಷ್ಟು ಮಂದಿ ಗುಣಮುಖರಾಗಿದ್ದು, 1,07,416 ಮಂದಿ ಸೋಂಕಿನಿಂದ ಬಲಿಯಾಗಿದ್ದಾರೆ. ದೇಶದಲ್ಲಿ ಮಹಾರಾಷ್ಟ್ರ ಅತೀ ಹೆಚ್ಚು ಸೋಂಕಿತರನ್ನು ಹೊಂದಿದ್ದು, 2,36,947 ಸಕ್ರಿಯ ಪ್ರಕರಣಗಳಿವೆ.
ಕರ್ನಾಟಕವು ಎರಡನೇ ಸ್ಥಾನದಲ್ಲಿದ್ದು, 1,18,870 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ತಿಳಿಸಿದೆ.