Saturday, August 13, 2022

Latest Posts

ಭಾರತದಲ್ಲಿ 20 ಲಕ್ಷ ಸೋಂಕಿತರು: ಕೇಂದ್ರ ಸರ್ಕಾರ ಕಾಣೆಯಾಗಿದೆ| ರಾಹುಲ್ ಗಾಂಧಿ ಟ್ವೀಟ್

ಹೊಸದಿಲ್ಲಿ: ವಿಶ್ವದಲ್ಲಿ ಭಾರತ ಕೊರೋನಾ ನಿಯಂತ್ರಣದಲ್ಲಿ ಉತ್ತಮ ಸ್ಥಾನದಲ್ಲಿದೆ ಎಂದು ಹೇಳುತ್ತಿರುವ ವೇಳೆಯಿಂದಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿಲೇ ಇದ್ದಾರೆ.

ಇಂದು ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ 20 ಲಕ್ಷ ದಾಟಲಿದ್ದು, ಮೋಧಿ ಸರ್ಕಾರ ಎಲ್ಲಿಯೋ ಕಣ್ಮರೆಯಾಗಿದೆ ಎಂದು ಟೀಕಿಸಿದ್ದು, ರಾಹುಲ್ ಗಾಂಧಿ ಅವರು ಜುಲೈ 17ರಂದು ಟ್ವೀಟ್ ಮಾಡಿದ್ದನ್ನು ರಿಟ್ವೀಟ್ ಮಾಡಿದ್ದು, ಅವರ ನಿರೀಕ್ಷೆಗಳು ಸತ್ಯವಾಗಿದೆ ಎಂದಿದ್ದಾರೆ.

ಜುಲೈ 17 ರಂದು  ದೇಶದಲ್ಲಿ 10ಲಕ್ಷ ಕೊರೋನಾ ಪ್ರಕರಣಗಳಾಗಿದ್ದು, ಆ.10ರೊಳಗೆ 20 ಲಕ್ಷ ಸೋಂಕಿತರಾಗುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದರು.

ರಾಹುಲ್ ಗಾಂಧಿ ಅವರು ಕೊರೋನಾ ವೇಳೆಯಲ್ಲಿ ಸರಣಿ ವೀಡಿಯೋ ಟ್ವೀಟ್ ಗಳ ಮೂಲಕ ಕೇಂದ್ರ ಸರ್ಕಾರದ ಪ್ರತಿ ಹೆಜ್ಜೆಯನ್ನು ಟೀಕಿಸುತ್ತಲೇ ಇದ್ದು, ಈ ಟ್ವೀಟ್ ಗಳಿಕೆ ಭಾರಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss