Tuesday, August 16, 2022

Latest Posts

ಭಾರತದಲ್ಲಿ 24 ಗಂಟೆಗಳಲ್ಲಿ 3967 ಪ್ರಕರಣಗಳು ಪತ್ತೆ: 100 ಮಂದಿ ಸಾವು

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3967 ಪ್ರಕರಣಗಳು ದಾಖಲಾಗಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನಿಂದ 100 ಮಂದಿ ಬಲಿಯಾಗಿದ್ದು, ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2649ಕ್ಕೆ ಏರಿಕೆಯಾಗಿದೆ.

ದೇಶಾದ್ಯಂತ 81970 ಕೊರೋನಾ ಸೋಂಕಿತರಿದ್ದು, ಇವರಲ್ಲಿ 5,401 ಮಂದಿ ಸಕ್ರಿಯ ಸೋಂಕಿತರಾಗಿದ್ದಾರೆ. ಉಳಿದ 27,920 ಮಂದಿ ಮಹಾಮಾರಿ ಕೊರೋನಾದಿಂದ ಬಚಾವ್ ಆಗಿ ಮನೆಗೆ ಹಿಂತಿರುಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss