ಭಾರತದಲ್ಲಿ 6185 ಮಂದಿ ಕೊರೋನಾ ಸೋಂಕಿನಿಂದ ಮುಕ್ತ: 872 ಮಂದಿ ಬಲಿ

0
70

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ದೇಶದಲ್ಲಿ ಕೊರೋನಾ ಸೋಂಕಿನಿಂದ ಗುಣಪಟ್ಟವರ ಸಂಖ್ಯೆ 6185 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ 20,835 ಸಕ್ರಿಯ ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 27,892ಕ್ಕೆ ಏರಿಕೆಯಾಗಿದೆ. ಮಹಾಮಾರಿ ಕೊರೋನಾ ಗೆ 872 ಮಂದಿ ಬಲಿಯಾಗಿದ್ದು. ದೇಶದಲ್ಲಿ ಲಾಕ್ ಡೌನ್ ಇನ್ನೂ ಮೇ.3ರವರೆಗೂ ಜಾರಿಯಲ್ಲಿರುತ್ತದೆ ಎಂದು ವರದಿ ತಿಳಿಸಿದೆ.

ಕೊರೋನಾ ಸೋಂಕಿಗೆ ಮಹಾರಾಷ್ಟ್ರ ತತ್ತರಿಸಿದ್ದು ಸೋಂಕಿತರ ಸಂಖ್ಯೆ 8000 ಗಡಿ ದಾಟಿದೆ. ಗುಜರಾತ್ ನಲ್ಲಿ 3 ಸಾವಿರಕ್ಕೂ ಅಧಿಕ ಸೋಂಕಿತರಿದ್ದು, ಅತೀ ಹೆಚ್ಚು ಸೋಂಕಿತರಲ್ಲಿ ಗುಜರಾತ್ 2ನೇ ಸ್ಥಾನ ಪಡೆದಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 2700ಕ್ಕೂ ಅಧಿಕ ಸೋಂಕಿತರು ದಾಖಲಾಗಿದ್ದಾರೆ.

ಕರ್ನಾಟಕದಲ್ಲಿ 503ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 19ಮಂದಿ ಬಲಿಯಾಗಿದ್ದು, 182 ಮಂದಿ ಗುಣಮುಖರಾಗಿದ್ದಾರೆ. ಇಂದು ರಾಜ್ಯದ ದಕ್ಷಿಣ ಕನ್ನಡದಲ್ಲಿ 1, ಕಲಬುರಗಿಯಲ್ಲಿ 2 ಕೊರೋನಾ ಪ್ರಕರಣ ಪತ್ತೆಯಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ

LEAVE A REPLY

Please enter your comment!
Please enter your name here