Saturday, June 25, 2022

Latest Posts

ಭಾರತದಲ್ಲೀಗ ಎಷ್ಟು ಚೀನಾ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದೆ? ಮಾಹಿತಿ ನೀಡಿದ ಸಚಿವ ಅನುರಾಗ್ ಠಾಕೂರ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗಲ್ವಾನ್ ಕಣಿವೆಯಲ್ಲಿ ಪುಂಡಾಟಿಕೆ ನಡೆಸಿದ್ದ ಚೀನಾಗೆ ನಿರಂತರ ಒಂದಲ್ಲ ಒಂದು ರೀತಿಯಲ್ಲಿ ಭಾರತ ಶಾಕ್ ನೀಡುತ್ತಿದ್ದು, ಚೀನಾದ ಒಂದಷ್ಟು ಕಂಪನಿಗಳನ್ನು ಕೂಡ ಭಾರತದಲ್ಲಿ ನಿಷೇಧಿಸಿತ್ತು.
2020 ರಲ್ಲಿ ಭಾರತ ಸರ್ಕಾರ ಒಂದಷ್ಟು ಚೀನಾ ಕಂಪನಿಗಳನ್ನು ನಿಷೇಧಿಸಿದ ನಂತರವೂ ಭಾರತದಲ್ಲಿ ಈಗ ಎಷ್ಟು ಚೀನಾ ಕಂಪನಿಗಳು ಕಾರ್ಯನಿರ್ವಹಣೆ ಮಾಡುತ್ತಿವೆ ಎಂಬುವುದರ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಸರ್ಕಾರದ ಪರವಾಗಿ ಮಾಹಿತಿ ನೀಡಿರುವ ಠಾಕೂರ್, “ಪ್ರಸ್ತುತ ಚೀನಾ ಮೂಲದ 80 ಕಂಪನಿಗಳು ಭಾರತದಲ್ಲಿ ಸಕ್ರಿಯ ಉದ್ಯಮಗಳನ್ನು ನಡೆಸುತ್ತಿದೆ” ಎಂದು ಹೇಳಿದ್ದಾರೆ. ಭಾರತದಲ್ಲಿ ಈ ವರೆಗೂ ಚೀನಾ ಮೂಲದ 92 ಕಂಪನಿಗಳು ನೋಂದಣಿ ಮಾಡಿಕೊಂಡಿವೆ.
ಚೀನಾ ಕಂಪನಿಗಳು ಭಾರತ ಸರ್ಕಾರದ ನಿಯಮಗಳಿಗೆ ಬದ್ಧವಾಗಿರಲು ಅಗತ್ಯವಿರುವ ಕಾನೂನುಗಳು ಜಾರಿಯಲ್ಲಿವೆ. ಇದನ್ನು ಎಲ್ಲಾ ಕಂಪನಿಗಳೂ ಪಾಲಿಸಬೇಕು ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss