Wednesday, August 17, 2022

Latest Posts

ಭಾರತದೊಂದಿಗೆ ಬಿಕ್ಕಟ್ಟು ಹೆಚ್ಚಳ ಹಿನ್ನೆಲೆ ಪಾಂಪಿಯೋ ಆಕ್ರೋಶ: ವಿಶ್ವಕ್ಕೆ ಚೀನಾ ಖಳನಾಯಕ ರಾಷ್ಟ್ರ

ವಾಷಿಂಗ್ಟನ್: ಲಡಾಖ್‌ನಲ್ಲಿ ಭಾರತದೊಂದಿಗೆ ಗಡಿ ಬಿಕ್ಕಟ್ಟು ಸೃಷ್ಟಿಸಿರುವ ಚೀನಾ ಕುತಂತ್ರವನ್ನು ಅಮೆರಿಕ ತೀವ್ರವಾಗಿ ಖಂಡಿಸಿದ್ದು, ಚೀನಾ ಒಂದು ರೀತಿ ಖಳನಾಯಕ ರಾಷ್ಟ್ರವಿದ್ದಂತೆ ಎಂದು ಹೇಳಿದೆ.
ಯುರೋಪ್ ಮತ್ತು ಚೀನಾ ಸವಾಲು ಎಂಬ ವಿಷಯದ ಮೇಲೆ ಆಯೋಜನೆಯಾಗಿದ್ದ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿ, ಗಡಿಯಲ್ಲಿ ನಿರಂತರವಾಗಿ ತಗಾದೆ ಸೃಷ್ಟಿಸುತ್ತಿರುವ ಚೀನಾ ವಿರುದ್ಧ ಅಮೆರಿಕ ರಕ್ಷಣಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಆಕ್ರೋಶ ವ್ಯಕಪಡಿಸಿದ್ದಾರೆ. ಜತೆಗೆ  ಚೀನಾಗೆ ಇಡೀ ವಿಶ್ವ ಇದುವರೆಗೂ ಹೊಂದಿರುವ ಪ್ರಗತಿಯನ್ನು ಬದಿಗಿಟ್ಟು, ತನ್ನದೇ ನೀತಿ – ನಿಯಮ ಹೇರುವ ಧ್ಯೇಯವಿದೆ ಎಂದು ಟೀಕಿಸಿದ್ದಾರೆ.
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಭಾರತದೊಂದಿಗೆ ಗಡಿ ಬಿಕ್ಕಟ್ಟು ಹೆಚ್ಚಿಸುವುದರೊಂದಿಗೆ, ಶಾಂತಿ ಒಪ್ಪಂದ ಮರೆತು ಹಿಂಸಾಚಾರಕ್ಕೆ ಇಳಿದಿದೆ. ಇತ್ತ ದಕ್ಷಿಣಾ ಚೀನಾ ಸಮುದ್ರದಲ್ಲಿ ಅಕ್ರಮವಾಗಿ ತನ್ನ  ಕಡಲ ಗಡಿ ವಿಸ್ತರಿಸುವ ತಂತ್ರದಲ್ಲಿ ತೊಡಗಿದೆ. ಈ ಮೂಲಕ ತನ್ನ ಅಂತಾರಾಷ್ಟ್ರೀಯ ಬಾಧ್ಯತೆಯನ್ನು ಅಪಾಯದಲ್ಲಿ ಸಿಲುಕಿಸುತ್ತಿದೆ ಎಂದು ಹೇಳಿದ್ದಾರೆ.
ಲಡಾಖ್ ಗಡಿ ಬಿಕ್ಕಟ್ಟಿನಲ್ಲಿ ಹುತಾತ್ಮರಾದ ಭಾರತದ ೨೦ ಯೋಧರ ಬಲಿದಾನಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ, ಪಾಂಪಿಯೋ ಚೀನಾವನ್ನು ಖಳನಾಯಕ ಎಂದು ಕರೆದಿದ್ದಾರೆ.ಹಲವಾರು ದಶಕಗಳಿಂದ ಪಾಶ್ಚಿಮಾತ್ಯ ರಾಷ್ಟ್ರಗಳು  ಚೀನಾ ಕಮ್ಯುನಿಸ್ಟ್ ಪಾರ್ಟಿಯನ್ನು ಬದಲಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಈ ಮೂಲಕವಾದರೂ ಚೀನಾ ಜನತೆಗೆ ಉತ್ತಮ ಜೀವನ ಒದಗಿಸುಬಹುದು ಎಂಬ ಆಶಯ ಹೊಂದಿದ್ದರು. ಆದರೆ ಚೀನಾದಲ್ಲಿ ಇಂದಿಗೂ ಕಮ್ಯುನಿಸ್ಟ್ ಪಕ್ಷದ ಅಟ್ಟಾಹಾಸ ಮೆರೆಯುತ್ತಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!