Saturday, July 2, 2022

Latest Posts

ಭಾರತದ ಕೊರೋನಾ ಲಸಿಕೆ ಉತ್ಪಾದನಾ ಸಾಮರ್ಥಕ್ಕೆ ಭೇಷ್ ಎಂದ ಬಿಲ್‌ ಗೇಟ್ಸ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತದ ನಾಯಕತ್ವ ಹಾಗೂ ಕೊರೋನಾ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ವಿಶ್ವದ ಪ್ರಸಿದ್ಧ ಉದ್ಯಮಿ ಬಿಲ್‌ ಗೇಟ್ಸ್ ಪ್ರಶಂಸಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಬಿಲ್ ಗೇಟ್ಸ್ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಭಾರತದ ನಾಯಕತ್ವ ಅದ್ಭುತವಾಗಿದೆ.  ಇಡೀ ವಿಶ್ವವೇ ಕೊರೋನಾ ವೈರಸ್ ನಿಯಂತ್ರಿಸಲು ಹೋರಾಡುತ್ತಿರುವ ಸಂದರ್ಭದಲ್ಲಿ ಭಾರತದ ವೈಜ್ಞಾನಿಕ ನಾಯಕತ್ವ ಹಾಗೂ ಲಸಿಕೆ ನಿರ್ಮಾಣದಲ್ಲಿ ತೋರುತ್ತಿರುವ ಕ್ಷಮತೆ ಅದ್ಭುತ ಎಂದಿದ್ದಾರೆ.

ಭಾರತ್ ಬಯೋಟೆಕ್‌ನ ಸ್ವದೇಶೀ ನಿರ್ಮಿತ ಲಸಿಕೆ ಹಾಗೂ ಸೀರಂ ಇನ್ಸ್ಟಿಟ್ಯೂಟ್‌ನ ‘ಕೋವಿಶೀಲ್ಡ್‌’ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಡಿಜಿಸಿಐ ಭಾನುವಾರ ಅನುಮೋದನೆ ನೀಡಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss