Thursday, August 11, 2022

Latest Posts

ಭಾರತದ ‘ಕೊವಿಶೀಲ್ಡ್’ ಲಸಿಕೆಯ ಬಳಕೆಗೆ ನೇಪಾಳ ಅನುಮೋದನೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸೇರಂ ಇನ್ಸ್ಟಿಟ್ಯೂಟ್​ ಆಫ್​ ಇಂಡಿಯಾ ಹಾಗೂ ಅಸ್ಟ್ರಾಜೆನೆಕಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಕೊವಿಶೀಲ್ಡ್’ ಲಸಿಕೆಯ ಬಳಕೆಗೆ ನೇಪಾಳ ಸರ್ಕಾರ ಅನುಮೋದಿಸಿದೆ.
ಇಂದು ದೆಹಲಿಯಲ್ಲಿ ನೇಪಾಳ-ಭಾರತ ಜಂಟಿ ಆಯೋಗದ ಆರನೇ ಸಭೆ ನಡೆದಿದ್ದು, ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ ಹಾಗೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್​ ಕೋವಿಡ್ ಲಸಿಕೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದಾರೆ.
ನೇಪಾಳದ ಡ್ರಗ್ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್ಮೆಂಟ್ (ಡಿಡಿಎ) ದೇಶದಲ್ಲಿ ಭಾರತ ನಿರ್ಮಿತ ಲಸಿಕೆ ಬಳಕೆಗೆ ಅನುಮತಿ ನೀಡಿ ಭಾರತದೊಂದಿಗೆ ಕೋವಿಡ್ ಲಸಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಭಾರತದ ಲಸಿಕೆಗೆ ಆದ್ಯತೆ ನೀಡುವ ಮೂಲಕ ನೇಪಾಳವು ಉಭಯ ರಾಷ್ಟ್ರಗಳ ಸಂಬಂಧವನ್ನು ಬಲಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss