ಹೊಸ ದಿಗಂತ ಆನ್ಲೈನ್ ಡೆಸ್ಕ್:
ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಸಖತ್ ಬುದ್ದಿ ಕಲಿತಿರುವ ಪಾಕಿಸ್ತಾನ, ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಗಡಿ ನಿಯಂತ್ರಣ ರೇಖೆಯ ಬಳಿ ಹೆಚ್ಚುವರಿ ಸೇನೆ ನಿಯೋಜಿಸುತ್ತಿದೆ!
ಎಷ್ಟೇ ಪೆಟ್ಟು ತಿಂದರೂ ಕುತಂತ್ರ ಬಿಡದ ಪಾಕ್, ಸಂಭಾವ್ಯ ದಾಳಿ ಎದುರಿಸಲು ಈ ಕ್ರಮಕ್ಕೆ ಮುಂದಾಗಿದೆ. ನ.13ರಂದು ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಶೆಲ್ ದಾಳಿ ನಡೆಸುವ ಮೂಲಕ ‘ದೀಪಾವಳಿಯ ಧಮಾಕಾ’ ತೋರಿಸಿತ್ತು. ಇದರಲ್ಲಿ ಸುಮಾರು 11 ಪಾಕ್ ಸೈನಿಕರು ಸತ್ತಿದ್ದರು. ಭಾರತದ ಇನ್ನಷ್ಟು ಪ್ರತಿದಾಳಿಗೆ ಅಂಜಿದ ಪಾಕ್, ಇದೀಗ ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿದೆ.
ಸೇನೆಗಳ ಮೂಲದ ಪ್ರಕಾರ ಪಾಕಿಸ್ತಾನ ಈ ವರ್ಷದಲ್ಲಿ ಇದುವರೆಗೆ ಒಟ್ಟು 74,052 ಬಾರಿ ಕದನ ವಿರಾಮವನ್ನ ಉಲ್ಲಂಘಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಕಳೆದ ವರ್ಷ ಪಾಕಿಸ್ತಾನ ಒಟ್ಟು 3,233 ಬಾರಿ ಕದನ ವಿರಾಮ ಉಲ್ಲಂಘಿಸಿತ್ತು.