ವಾಷಿಂಗ್ಟನ್: ಜಿ 7 ಕೂಟದಲ್ಲಿ ಭಾರತ ಸದಸ್ಯತ್ವ ಹೊಂದಲು ಅಮೆರಿಕ ಹಸಿರುನಿಶಾನೆ ತೋರಿದೆ.
ಮುಂದಿನ ಸೆಪ್ಟೆಂಬರ್ನಲ್ಲಿ ಜಿ7 ದೇಶಗಳ ಶೃಂಗಸಭೆ ನಡೆಯುವ ಸಾಧ್ಯತೆ ಇದ್ದು ಕೂಟದೊಳಗೆ ಪ್ರವೇಶಿಸಲು ಡೋನಾಲ್ಡ್ ಟ್ರಂಪ್ ಸಮ್ಮತಿ ಸೂಚಿಸಿದ್ದಾರೆ.
ಎಲ್ಲ ರಂಗಗಳಲ್ಲೂ ಭಾರತವೀಗ ಮುನ್ನಡೆ ಸಾಧಿಸಿದ್ದು, ಭಾರತದ ಶಕ್ತಿ,ಸಾಮರ್ಥ್ಯಗಳನ್ನು ಅರಿತ ಅಮೆರಿಕಾ ಈಗ ಈ ವಿಷಯದಲ್ಲಿ ಭಾರತದ ಪರವಾಗಿ ನಿಂತಿದೆ. ಈಗಾಗಲೇ ಜಿ 7 ಕೂಟದಲ್ಲಿ ಬ್ರಿಟನ್, ಇಟಲಿ, ಫ್ರಾನ್ಸ್, ಜರ್ಮನಿ, ಜಪಾನ್,ಕೆನಡಾ ಹಾಗೂ ಅಮೆರಿಕ ದೇಶಗಳು ಸದಸ್ತತ್ವ ಪಡೆದಿವೆ. ಇದರ ಜೊತೆಗೆ ಕೂಟದಲ್ಲಿ ಸದಸ್ಯತ್ವ ಹೊಂದಲು ಭಾರತವಲ್ಲದೆ ರಷ್ಯಾ, ದ.ಆಫ್ರಿಕಾ, ಕೊರಿಯಾ ಮತ್ತು ಆಸ್ಟ್ರೇಲಿಯಾ ದೇಶಗಳೂ ಜಿ 7 ಕೂಟದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದೆ.