ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟ್ ಆಟಗಾರ ಕೆವಿನ್ ಪೀಟರ್ಸನ್ ಭಾರತದ ಕುರಿತಂತೆ ಮಾಡಿರುವ ಟ್ವೀಟ್’ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು, ಭಾರತದ ಮೇಲಿರುವ ನಿಮ್ಮ ಪ್ರೀತಿ ನೋಡಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಕ್ಕೆ ಸ್ವದೇಶಿ ಉತ್ಪಾದಿತ ಕೋವಿಡ್ ಲಸಿಕೆಯನ್ನು ಕಳಿಸಿರುವ ಹಿನ್ನೆಲೆಯಲ್ಲಿ ಕೆವಿನ್ ಪೀಟರ್ಸನ್ ಟ್ವೀಟ್ ಮಾಡಿದ್ದು, ಭಾರತದ ದಯಾಗುಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದ ಮೇಲಿನ ಪ್ರೀತಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದರು.
Indian generosity and kindness grows more and more every single day.
The beloved country! ??— Kevin Pietersen? (@KP24) February 2, 2021
ಪೀಟರ್ಸನ್ ಟ್ವೀಟ್’ಗೆ ಮೋದಿ ಪ್ರತಿಕ್ರಿಯೆ ನೀಡಿದ್ದು, “ಇಡೀ ವಿಶ್ವವನ್ನು ನಮ್ಮ ಕುಟುಂಬ ಎಂದು ಭಾವಿಸುತ್ತೇವೆ.ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸುವಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲು ಬಯಸುತ್ತೇವೆ. ಭಾರತದ ಮೇಲಿರುವ ನಿಮ್ಮ ಪ್ರೀತಿ ನೋಡಿ ಸಂತೋಷವಾಯಿತು” ಎಂದು ಹೇಳಿದ್ದಾರೆ.
ಮೋದಿಯವರ ಟ್ವೀಟ್’ಗೆ ಕೈ ಮುಗಿಯುತ್ತಿರುವ ಇಮೋಜಿಗಳನ್ನು ಹಾಕಿ ಪೀಟರ್ಸನ್ ಧನ್ಯವಾದ ತಿಳಿಸಿದ್ದಾರೆ.
Glad to see your affection towards India. 🙂
We believe that the world is our family and want to play our role in strengthening the fight against COVID-19. https://t.co/zwpB3CNxLG
— Narendra Modi (@narendramodi) February 3, 2021