ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತದ ಮೋಸ್ಟ್ ವಾಂಟೆಡ್ ಉಗ್ರ , ಕೊಲೆ, ಅತ್ಯಾಚಾರ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದ ಉಗ್ರ ಓಮರ್ ಸಯೀದ್ ಶೇಖ್ನನ್ನು ಕೂಡಲೇ ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಕೋರ್ಟ್ ಆದೇಶಿಸಿದೆ.
1999ರಲ್ಲಿ ಭಾರತದಲ್ಲಿ ಬಂಧನವಾಗಿದ್ದ ಈತನನ್ನು ಬಳಿಕ ಬಿಡುಗಡೆಗೊಳಿಸಲಾಗಿತ್ತು, ಅದಾದ ಬಳಿಕ ಮತ್ತೆ 2002ರಲ್ಲಿ ಪಾಕ್ ಪೊಲೀಸರು ಬಂಧಿಸಿದ್ದರು. ಈ ಬಳಿಕ ವಿಚಾರಣೆಗಳು ನಡೆಯುತ್ತಲೇ ಇತ್ತು. ಇದೀಗ ಇಂದು ಪಾಕಿಸ್ತಾನದ ಕೋರ್ಟ್, ಅನ್ಯಾಯವಾಗಿ ಒಬ್ಬ ನಿರಪರಾಧಿಯನ್ನು 18 ವರ್ಷ ಜೈಲಿನಲ್ಲಿ ಇರುವಂತೆ ಮಾಡಿರುವುದು ಉಚಿತವಲ್ಲ. ಕೂಡಲೇ ಈತನನ್ನು ಬಿಡುಗಡೆ ಮಾಡಿ ಎಂದು ಆದೇಶಿಸಿದೆ.
ಈತನ ಜತೆಗೆ ಇನ್ನೂ ಕೆಲವರನ್ನು ಬಂಧಿಸಿ ಜೈಲಿಗೆ ಹಾಕಿರುವುದು ಅಕ್ರಮ. ಈ ರೀತಿ ನಿರಪರಾಧಿಗಳನ್ನು ಇಟ್ಟುಕೊಂಡಿರುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿಂಧ್ ಹೈಕೋರ್ಟ್ ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಭಾರತದ ಮೋಸ್ಟ್ ವಾಂಟೆಡ್ ಉಗ್ರ:
1999ರ ವೇಳೆಯಲ್ಲಿ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಈತನ ವಿರುದ್ಧದ ಅಪರಾಧ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಭಾರತದ ಜೈಲಿನಲ್ಲಿ ಬಂಧಿಸಿ ಇಡಲಾಗಿತ್ತು. ಆ ಬಳಿಕ ಈತನ ಬಿಡುಗಡೆಗೆ ಪಾಕಿಸ್ತಾನದ ಉಗ್ರರಿಂದ ಭಾರಿ ಒತ್ತಡಗಳು ಬರಲಾರಂಭಿಸಿದ್ದವು. ಆದರೆ ಭಾರತ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಲಿಲ್ಲ. ಇದರಿಂದ ಆತ ಇದರಿಂದ ಆತ ಜೈಲಿನಲ್ಲಿ ಇದ್ದುಕೊಂಡೇ ತನ್ನ ಪ್ರಭಾವ ಬಳಸಿಕೊಂಡು , ಭಾರತೀಯರನ್ನು ಹೊತ್ತಿದ್ದ ವಿಮಾನವನ್ನೇ ಹೈಜಾಕ್ ಮಾಡಿಸಿದ್ದ ಮತ್ತು ವಿಮಾನದಲ್ಲಿ ಇದ್ದವರನ್ನು ಸುರಕ್ಷಿತವಾಗಿ ಬಿಡಬೇಕು ಎಂದರೆ, ಈತನ ಬಿಡುಗಡೆ ಮಾಡಬೇಕು ಎಂದು ಅಂದಿನ ಸರ್ಕಾರಕ್ಕೆ ಪಾಕಿಸ್ತಾನ ಹೇಳಿತ್ತು.
ಈ ವೇಳೆ ಭಾರತ ಸರಕಾರ ಬೇರೆ ದಾರಿ ತೋಚದೆ ಆತನನ್ನು ಬಿಡುಗಡೆ ಮಾಡಿತ್ತು. ಆ ಬಳಿಕವೂ ಆತ ಹಲವಾರು ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನು.
2002ರಲ್ಲಿ ಪತ್ರಕರ್ತ ಡೇನಿಯಲ್ ಪರ್ಲ್ ಶೂನ್ಯ ಅವರ ಹತ್ಯೆಯಾದ ಬಳಿಕ ಈತನ ಬಂಧನ ಪಾಕಿಸ್ತಾನದ ಪೊಲೀಸರಿಗೆ ಅನಿವಾರ್ಯವಾಗಿತ್ತು. ಆ ಬಳಿಕ ಆತ 18 ವರ್ಷಗಳ ಕಾಲ ಜೈಲಿನಲ್ಲಿಯೇ ಇದ್ದನು. ಈತನಿಗೆ ಕೆಳಹಂತದ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು.