ನವದೆಹಲಿ: ಭಾರತದ ರೈಲುಗಳನ್ನು ನಡೆಸಲು ಎರಡು ವಾರಗಳ ಕಾಲ ಖಾಸಗಿ ಹೂಡಿಕೆದಾರರಿಗೆ ಅವಕಾಶ ನೀಡಲಾಗಿದೆ ಎಂದು ರೈಲ್ವೇ ಬೋರ್ಡ್ ಅಧ್ಯಕ್ಷರಾದ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಭಾರತಲ್ಲಿ 150 ಆಧುನಿಕ ರೈಲುಗಳನ್ನು ಆದಾಯ ಹಂಚಿಕೆ ಮಾದರಿಯಲ್ಲಿ ರೂಪಿಸಲಾಗಿದೆ. 100 ಮಾರ್ಗಗಳನ್ನು 150 ಪ್ರಯಾಣಿಕ ರೈಲುಗಳಿಗೆ ಗುರುತಿಸಲಾಗಿದೆ. ಸದ್ಯ ಒಟ್ಟಾರೆ 36 ರೈಲುಗಳು ನವದೆಹಲಿಗೆ, 26 ರೈಲುಗಳೂ ಮುಂಬೈಗೆ, 12 ರೈಲು ಕಲ್ಕತಾಗೆ, 11 ರೈಲುಗಳು ಚೆನ್ನೈ ಮತ್ತು ಬೆಂಗಳೂರಿಗೆ 8 ರೈಲುಗಳೆಂದು ಗುರುತಿಸಲಾಗಿದೆ.
ಭಾರತದ ರೈಲ್ವೇ ತನ್ನ ಮೂಲಭೂತ ಸೌಕರ್ಯಗಳನ್ನು ಖಾಸಗಿ ಹೂಡಿಗೆದಾರರೊಂದಿಗೂ ಇರಿಸಿಕೊಳ್ಳುತ್ತದೆ. ಪ್ರಯಾಣಿಕರಿಗೆ ಊಟ, ಮನರಂಜನೆ ಮತ್ತು ಪ್ರಯಾಣದ ವೇಳೆ ಬೇಕಾದ ವಿಶ್ರಾಂತಿಯನ್ನು ನೀಡಲು ರೈಲ್ವೇ ಮಂಡಳಿ ತಿಳಿಸಿದೆ.