Wednesday, June 29, 2022

Latest Posts

ಭಾರತದ ಲಸಿಕೆ ಹಾಕಿಸಿಕೊಂಡು ಟ್ವಟರ್​ನಲ್ಲಿ ಖುಷಿ ಹಂಚಿಕೊಂಡ ಬಿಲ್​ ಗೆಟ್ಸ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ವಿಶ್ವದ ಪ್ರಸಿದ್ಧ ಉದ್ಯಮಿ ಬಿಲ್​ ಗೆಟ್ಸ್​ ಖುದ್ದಾಗಿ ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ.
ಕೊರೋನಾ ವಿರುದ್ಧದ ಭಾರತದ ಹೋರಾಟ ಹಾಗೂ ಲಸಿಕೆ ಉತ್ಪಾದನಾ ಸಾಮರ್ಥ್ಯ ಪ್ರಶಂಸಿಸಿದ್ದ 65 ವರ್ಷದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ ಗೆಟ್ಸ್​ ಭಾರತದಲ್ಲಿ ಅಭಿವೃದ್ಧಿಗೊಂಡಿರುವ ಕೋವಿಡ್​ ಲಸಿಕೆ ಹಾಕಿಸಿಕೊಂಡಿದ್ದಾರೆ.
ಈ ಕುರಿತು ಟ್ವಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಅವರು, ಕೋವಿಡ್ ಮೊದಲ ಲಸಿಕೆ ಪಡೆದುಕೊಂಡಿದ್ದು, ಆರೋಗ್ಯವಾಗಿದ್ದೇನೆ. ಎಲ್ಲ ವಿಜ್ಞಾನಿಗಳು, ಪ್ರಯೋಗದಲ್ಲಿ ಭಾಗಿಯಾದವರು ಹಾಗೂ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss