spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, October 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಾರತದ ವಿರುದ್ಧ ಹೋಗಿದ್ದು ಭಾರೀ ದೊಡ್ಡ ತಪ್ಪು: ಒಪ್ಪಿದ ಮಲೇಷ್ಯಾ ನಾಯಕ

- Advertisement -Nitte

ಕೌಲಾಲಂಪುರ: ತಾನು ಭಾರತದ ವಿರುದ್ಧ ನಿಲುವು ತಾಳಿದ್ದು ತಾನೆಸಗಿದ ಭಾರೀ ದೊಡ್ಡ ತಪ್ಪು ಎಂಬುದೀಗ ತನಗೆ ಅರಿವಾಗಿದೆ ಎಂಬುದಾಗಿ ಮಲೇಷ್ಯಾದಲ್ಲಿ ಅಧಿಕಾರ ಕಳೆದುಕೊಂಡ ಮತ್ತು ತನ್ನ ಪಕ್ಷದಿಂದಲೇ ಹೊರಹಾಕಲ್ಪಟ್ಟ ಮಲೇಷ್ಯಾದ ಮಾಜಿ ಪ್ರಧಾನಿ ಮಹಾತೀರ್ ಮೊಹಮ್ಮದ್ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅಧಿಕಾರ ಕಳೆದುಕೊಂಡ ಬಳಿಕ ೯೫ ವರ್ಷದ ಈ ನಾಯಕನೀಗ ಆತ್ಮಾವಲೋಕನಕ್ಕೆ ಮುಂದಾಗಿದ್ದಾರೆ.
ಡಬ್ಲ್ಯೂಐಒಎನ್ ಸಂಪಾದಕ ಪಾಲ್ಕಿ ಶರ್ಮ ಅವರಿಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಮಹಾತಿರ್ , ತನ್ನ ಅಧಿಕಾರದ ಅಂತಿಮ ದಿನಗಳಲ್ಲಿ ತಾನು ಭಾರತದ ವಿರುದ್ಧ ಆಕ್ರಮಣಕಾರಿಯಾಗಿ ವರ್ತಿಸಿದೆ. ಕಾಶ್ಮೀರ ವಿಷಯದಲ್ಲಿ ತಾನು ತಳೆದ ಭಾರತ ವಿರೋಧಿ ನಿಲುವಿನ ತಪ್ಪು ನಡೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಭಾರೀ ಪೆಟ್ಟು ನೀಡಿತು ಎಂಬುದಾಗಿ ಒಪ್ಪಿಕೊಂಡರು. ಭಾರತವು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ೩೭೦ನೇ ವಿಧಿ ರದ್ದು ಮಾಡಿದ ಬಳಿಕ , ವಿಶ್ವಸಂಸ್ಥೆ ಮಹಾವೇಶನದಲ್ಲಿ ಮಾತನಾಡಿದ್ದ ಮಹಾತಿರ್ ಭಾರತ ಕಾಶ್ಮೀರದಲ್ಲಿ ಆಕ್ರಮಣ ನಡೆಸಿದೆ ಎಂಬುದಾಗಿ ಆರೋಪಿಸಿದ್ದರು.
ಇಸ್ಲಾಮಿಕ್ ಮತೀಯ ನೆಲೆಯಲ್ಲಿ ಕಾಶ್ಮೀರ ವಿಷಯದಲ್ಲಿ ಭಾರತ ವಿರೋಧಿ ನಿಲುವು ತಳೆದಿದ್ದ ಮಹಾತಿರ್ , ಇದೀಗ ಅಧಿಕಾರದಿಂದ ಹೊರಹಾಕಲ್ಪಟ್ಟ ಬಳಿಕ ಕಾಶ್ಮೀರ ವಿಷಯದಲ್ಲಿ ತನ್ನ ತಪ್ಪು ನಿಲುವು ಭಾರತದೊಂದಿಗಿನ ಸಂಬಂಧವನ್ನು ಹದಗೆಡಿಸಿತು.ಈ ನಿಲುವೇ ದ್ವಿಪಕ್ಷೀಯ ಸಂಬಂಧವನ್ನು ಹಾಳುಗೆಡವಿತು. ಇದನ್ನು ಹೊರತುಪಡಿಸಿದರೆ ತನ್ನ ಆಡಳಿತಾಧಿವಯಲ್ಲೂ ಭಾರತದೊಂದಿಗೆ ಉತ್ತಮ ಸಂಬಂಧವೇ ಇತ್ತು ಎಂದು ಅವರು ನೆನಪಿಸಿಕೊಂಡರು.
ಮೋದಿ ಜಾಗತಿಕ ನಾಯಕ
ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯವಾಗಿ ಅತ್ಯಂತ ಉತ್ತಮ ನಾಯಕ ಎಂಬುದಾಗಿ ಬಣ್ಣಿಸಿದ ಮಹಾತಿರ್, ಆದರೆ ಮೋದಿಯವರಡಿಯಲ್ಲಿನ ಭಾರತವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಯಾಕೆಂದರೆ ಈ ಹಿಂದಿನ ಭಾರತೀಯ ಪ್ರಧಾನಿಗಳಿಗಿಂತ ಮೋದಿಯವರು ವಿಭಿನ್ನರಾಗಿದ್ದಾರೆ ಎಂದರು.
ಕಾಶ್ಮೀರ ವಿಷಯದಲ್ಲಿ ಭಾರತವನ್ನು ಕೆಟ್ಟದಾಗಿ ಟೀಕಿಸಿದ್ದ ಮಹಾತಿರ್ ಅವರ ಕುತ್ಸಿತ ನಿಲುವನ್ನು ಗಂಭೀರವಾಗಿ ಪರಿಗಣಿಸಿದ ಮೋದಿ ಸರಕಾರವು , ಮಲೇಷ್ಯಾದಿಂದ ಪಾಮೋಲಿನ್ ಎಣ್ಣೆ ಆಮದಿನ ಮೇಲೆ ಕಠಿಣ ನಿರ್ಬಂಧ ವಿಧಿಸಿತು. ಮಲೇಷ್ಯಾ ಆರ್ಥಿಕತೆಯು ಪಾಮೋಲಿನ್ ಎಣ್ಣೆ ರಫ್ತನ್ನು ಬಹುವಾಗಿ ನೆಚ್ಚಿಕೊಂಡಿದ್ದು, ಭಾರತದ ಕ್ರಮದಿಂದಾಗಿ ಜನವರಿಯಿಂದ ಏಪ್ರಿಲ್ ನಡುವೆ ಈ ಆಮದು ಶೇ.೯೪ರಷ್ಟು ಕುಸಿಯಿತು. ಇದು ಮಲೇಷ್ಯಾಕ್ಕೆ ದುಬಾರಿಯಾಗಿ ಪರಿಣಮಿಸಿತು. ದಕ್ಷಿಣ ಏಶ್ಯಾದ ಕಿಂಗ್‌ಮೇಕರ್ ಎಂದೇ ಬಣ್ಣಿಸಲ್ಪಟ್ಟಿದ್ದ ಮಹಾತಿರ್ ೨೫ವರ್ಷಗಳ ನಿರಂತರ ಅಧಿಕಾರ ನಡೆಸಿದ್ದರು. ಇಸ್ಲಾಮಿಕ್ ಜಗತ್ತಿನ ನಾಯಕನಾಗುವ ಮಹತ್ವಾಕಾಂಕ್ಷೆ ಯಡಿ ಭಾರತದ ವಿರುದ್ಧ ತಳೆದ ತಪ್ಪು ನಿಲುವು ಅವರ ರಾಜಕೀಯ ಜೀವನದ ಕೊನೆಯಲ್ಲಿ ಮರೆಯಲಾಗದ ಪಾಠ ಕಲಿಯುವಂತೆ ಮಾಡಿಸಿತ್ತು. ಭಾರತದ ಹಿಂದಿನ ಆಡಳಿತಗಳನ್ನು ನೋಡಿದ್ದ ಮಹಾತಿರ್ , ಮೋದಿ ನೇತೃತ್ವದ ಭಾರತ ಇಂತಹ ದೃಢ ನಿಲುವು ತೆಗೆದುಕೊಳ್ಳಬಹುದೆಂಬುದನ್ನು ಅವರು ನಿರೀಕ್ಷಿಸಿರಲಿಲ್ಲ.ಇದೀಗ ಮಲೇಷ್ಯಾದ ಪ್ರಧಾನಿಯಾಗಿರುವ ಮೊಹಿಯಿದ್ದೀನ್ ಯಾಸಿನ್ ಅವರು ಭಾರತದೊಂದಿಗೆ ಹೆಚ್ಚು ಸ್ನೇಹಯುತ ಸಂಬಂಧ ಹೊಂದುವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss