Tuesday, June 28, 2022

Latest Posts

ಭಾರತದ ವೀರ ಮಹನೀಯರ ಸೇವೆ ಅನನ್ಯ, ಸಾಧನೆಗಳ ಮೈಗೂಡಿಸಿಕೊಳ್ಳಿ: ಕಮಲಾ ಭಟ್ಟ

ಹುಬ್ಬಳ್ಳಿ: ವೀರರಾಣಿ ಕಿತ್ತೂರು ಚನ್ನಮ್ಮಾ ಹಾಗೂ ಭಗಿನಿ ನಿವೇದಿತಾ ಇಬ್ಬರು ಮಹನೀಯರುಗಳ ಸೇವೆ ಭಾರತಕ್ಕೆ ಅನನ್ಯ. ಇಂತಹ ಮಹನೀಯರುಗಳ ಜೀವನ, ಸಾಧನೆಗಳನ್ನು ಪ್ರತಿಯೊಬ್ಬ ಮಹಿಳೆಯರು ಮೈಗೂಡಿಸಿಕೊಳ್ಳುವುದು ಸೂಕ್ತ ಎಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಶೈಕ್ಷಣಿಕ ಸಲಹೆಗಾರರಾದ ಕಮಲಾ ಭಟ್ಟ ಸಲಹೆ ನೀಡಿದರು.
ಸಾಮರಸ್ಯ ವೇದಿಕೆ ಹಾಗೂ ಲೋಕಹಿತ ಟ್ರಸ್ಟ್ ಹುಬ್ಬಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಸಂಜೆ ನಗರದ ಗೋಕುಲ ರಸ್ತೆಯ ವಾಸವಿ ಮಹಲ್‌ನಲ್ಲಿ ಆಯೋಜಿಸಲಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಭಗಿನಿ ನಿವೇದಿತಾ ಜಯಂತಿ ಆಚರಣೆ ಕಾಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.
ಭಾರತ ದೇಶಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಭಗಿನಿ ನಿವೇದಿತಾ ಅವರು ಕೊಡುಗೆ ಅಮೋಘ. ಚನ್ನಮ್ಮ ದೇಶಕ್ಕೆ ವಕ್ಕರಿಸಿದ್ದ ಬ್ರಿಟೀಷರ ವಿರುದ್ಧ ಹಗಲಿರುಳು ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಭಗಿನಿ ನಿವೇದಿತಾ ಸ್ವಾಮಿ ವಿವೇಕಾನಂದರ ತತ್ವಾದಶಕ್ಕೆ ಪ್ರೇರೆಪಿತರಾಗಿ ಸ್ವದೇಶವನ್ನು ತೊರೆದು ಭಾರತಕ್ಕೆ ಆಗಮಿಸಿ ಇಲ್ಲಿನ ಜನರ ಸೇವೆಗೆ ಬದುಕನ್ನೇ ಮುಡುಪಾಗಿಟ್ಟರು. ಇಂತಹ ಮಹನೀಯರುಗಳಿಬ್ಬರು ಮಹಿಳೆಯರೇ ಎಂಬುದು ವಿಶೇಷ. ವೀರ ಮಹಿಳೆ ಹಾಗೂ ಭಗಿನಿ ನಿವೇದಿತಾ ಅವರುಗಳಜೀವನಾದಶ ಪ್ರತಿಯೊಬ್ಬ ಮಹಿಳೆಯರಿಗೂ ಆದರ್ಶಪ್ರಾಯ ಎಂದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪುರುಷರನ್ನು ನಾಚಿಸುವ ನಿಟ್ಟಿನಲ್ಲಿ ಹೋರಾಟ, ಸಮಾಜ ಸೇವೆ ಗೈದಿರುವ ಈ ಇಬ್ಬರು ಮಹಿಳೆಯರು ಪ್ರಸ್ತುತ ಮಹಿಳಾ ಸಮುದಾಯಕ್ಕೆ ಆದರ್ಶಪ್ರಾಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ವಾವಲಂಬಿ ಹಾಗೂ ಸ್ವಾಭಿಮಾನ ಎರಡರ ಬಗ್ಗೆಯೂ ನಿಲಕ್ಷ್ಯ ಧೋರಣೆ ಹೊಂದಿದ್ದಾರೆ. ಇದರಿಂದಾಗಿ ಮಹಿಳೆಯರು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಉತ್ತುಂಗಕ್ಕೇರುತ್ತಿದೆ. ಇಂತಹ ದಿನಮಾನಗಳಲ್ಲಿ ಮಹಿಳೆಯರು ಹೆಚ್ಚು ಸ್ವಾಭಿಮಾನ ಮತ್ತು ಸಮಾಜ ಸೇವೆಯಂತಹ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೂಕ್ತ ಎಂದರು.
ವೀರ ಮಹಿಳೆಯರ ಚರಿತ್ರೆಗಳನ್ನು ಓದಿ ತಿಳಿದುಕೊಳ್ಳುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಮಹಿಳೆಯರು ಸಮಾಜದಲ್ಲಿ ಗುರುತಿಸುವಿಕೆಯನ್ನು ಹೊಂದುವುದರ ಜೊತೆಗೆ ಗೌರವಿಸುವ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.
ಸಾಮರಸ್ಯ ವೇದಿಕೆಯ ಪ್ರಾಂತ ಸಂಯೋಜಕ ಶ್ರೀಧರ ಜೋಶಿ ಮಾತನಾಡಿದರು.
ಡಾ.ರಚನಾ ನಾಡಗೇರಿ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss