ಭಾರತಿಯ ಉದ್ಯೋಗಿಗಳಿಗೆ ಅಮೆರಿಕಾ ಬಿಗ್ ಶಾಕ್: ವರ್ಷಾಂತ್ಯದವರೆಗೆ ಹೆಚ್-1ಬಿ ವೀಸಾ ರದ್ದು

0
149

ಅಮೆರಿಕಾ: ಹೆಚ್-1ಬಿ ವೀಸಾ ವರ್ಷಾಂತ್ಯದವರೆಗೆ ತಾತ್ಕಾಲಿಕವಾಗಿ ರದ್ದು ಮಾಡಿ ಆದೇಶ ಹೊರಡಿಸುವ ಮೂಲಕ ಭಾರತಿಯ ಉದ್ಯೋಗಿಗಳಿಗೆ ಅಮೆರಿಕಾ ಬಿಗ್ ಶಾಕ್ ನೀಡಿದೆ.
ಕೊರೋನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ವಲಸಿಗರನ್ನು ತಾತ್ಕಾಲಿಕವಾಗಿ ತಡೆಯಲು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಅಮೆರಿಕಾ ಹೇಳಿಕೊಂಡಿದ್ದರೂ, ಈ ಕಠಿಣ ನಿರ್ಧಾರದಿಂದಾಗಿ ಅಮೆರಿಕಾದಲ್ಲಿ ಬರೋಬ್ಬರಿ 5.25,000 ಉದ್ಯೋಗಗಳು ತೆರವಾಗಿದೆ. ಟ್ರಂಪ್ ನೂತನ ಆದೇಶದಿಂದ H-1B, H-4, H-2B ವೀಸಾ, ಜೆ ಮತ್ತು ಎಲ್ ವೀಸಾಗಳು ಸೇರಿದಂತೆ ಹಲವಾರು ಜನಪ್ರಿಯ ವಲಸೆರಹಿತ ವೀಸಾಗಳನ್ನು ಕೂಡ ಪ್ರಸಕ್ತ ವರ್ಷದ ಅಂತ್ಯದವರೆಗೂ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಈನಡುವೆ ಉಭಯ ದೇಶಗಳ ವಾಯುಯಾನ ಒಪ್ಪಂದವನ್ನು ಭಾರತ ಮುರಿದಿದೆ ಎಂದು ಆರೋಪಿಸಿರುವ ಅಮೆರಿಕ, ಭಾರತದ ವಿಶೇಷ ವಿಮಾನಗಳಿಗೆ ನಿರ್ಬಂಧ ಹೇರಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಏರ್‌ ಇಂಡಿಯಾವು ಅಮೆರಿಕದಲ್ಲಿರುವ ನಾಗರಿಕರನ್ನು ಕರೆತರಲು ವಿಶೇಷ ವಿಮಾನಗಳು ಕಳುಹಿಸಿದೆ, ಅದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಟಿಕೆಟ್‌ನ್ನು ಕೂಡ ವಿತರಿಸಿದೆ ಎಂದು ಅಮೇರಿಕ ಆರೋಪಿಸಿದೆ.

LEAVE A REPLY

Please enter your comment!
Please enter your name here