ಭಾರತೀಯರ ಶೌರ್ಯರ ಕಂಡು ಬೆಚ್ಚಿರುವ ಚೀನೀ ಸೈನಿಕರು !

0
529

ಮೊನ್ನೆಯ ಗಡಿ ಸಂಘರ್ಷದಲ್ಲಿ ಭಾರತದ ಇಪ್ಪತ್ತು ಯೋಧರು ಸಾವಿಗೀಡಾಗಿರುವುದು ನಿಜವಾದರೂ ಭಾರತೀಯ ಸೈನಿಕರ ಶೌರ್ಯ ಕಂಡು ಚೀನೀ ಸೈನಿಕರೇ ಬೆಚ್ಚಿಬಿದ್ದಿದ್ದಾರೆ. ಚೀನೀಯರಿಂದ ಬಿಡುಗಡೆಗೊಂಡು ಬಂದಿರುವ ಸೈನಿಕರು ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
ಚೀನೀ ಸೈನಿಕರು ಸಾಕಷ್ಟು ಪೂರ್ವಯೋಜನೆ ಮಾಡಿ ದಾಳಿ ನಡೆಸಿದ್ದರೂ ಹಾಗೂ ಅಧಿಕ ಸಂಖ್ಯೆಯಲ್ಲಿದ್ದರೂ ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿ ಚೀನೀಯರ ಕಡೆಯಲ್ಲೂ ಸಾಕಷ್ಟು ಸಾವು ನೋವಿಗೆ ಕಾರಣವಾಗಿರುವುದು ಚೀನಿಯರ ದೃತಿಗೆಡಿಸಿದೆ. ಸಂಡೇ ಗಾರ್ಡಿಯನ್ ಪತ್ರಿಕೆಯು ಇದನ್ನು ವರದಿ ಮಾಡಿದೆ.
ಇಬ್ಬರು ಮೇಜರ್‌ಗಳೂ ಸೇರಿದಂತೆ ಬಂಧಿತ ೧೦ ಭಾರತೀಯ ಸೈನಿಕರು ಎರಡು ದಿನ ಚೀನೀಯರ ವಶದಲ್ಲಿದ್ದರು. ಆಗ ಅವರಿಗೆ ಚೀನೀಯರು ಆಘಾತಗೊಂಡಿರುವುದು ಸ್ಪಷ್ಟವಾಗಿತ್ತು. ಭಾರತೀಯ ಸೈನಿಕರ ಯುದ್ಧಕೌಶಲ ಮತ್ತು ಶೌರ್ಯವು ಅವರನ್ನು ಬೆಚ್ಚಿಬೀಳಿಸಿದೆ ಎಂದು ಅವರು ನುಡಿಯುತ್ತಾರೆ.
ಈ ಸೈನಿಕರು ತಮ್ಮ ಸಹಚರರ ಸಾವಿನ ಸೇಡು ತೀರಿಸಲಿಕ್ಕಾಗಿ ಚೀನೀ ಪ್ರದೇಶದೊಳಕ್ಕೆ ಧೈರ್ಯದಿಂದ ನುಗ್ಗಿದಾಗ ಬಂಧಿಸಲ್ಪಟ್ಟಿದ್ದರು.
ಭಾರತೀಯ ಸೈನಿಕರ ಪ್ರತಿದಾಳಿ ತಡೆಯಲಾರದೆ ಹಲವಾರು ಚೀನಿ ಸೈನಿಕರು ಹೆದರಿ ಹಿಂದೆ ಓಡಿದ್ದರು ಎಂದೂ ಇವರು ಹೇಳುತ್ತಾರೆ.
ಸರಕಾರದೆಡೆಗೆ ಚೀನೀಯರ ಆಕ್ರೋಶ
ಇದೇವೇಳೆ, ಭಾರತದಲ್ಲಿ ಮಡಿದ ಯೋಧರಿಗೆ ಇಡೀ ದೇಶವೇ ಗೌರವ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿರಬೇಕಾದರೆ ಚೀನಾ ಮಾತ್ರ ತನ್ನ ಸೈನಿಕರ ಸಾವನ್ನು ಮುಚ್ಚಿಟ್ಟಿರುವುದನ್ನು ಚೀನಾದ ಪ್ರಜೆಗಳು ಪ್ರಶ್ನಿಸುತ್ತಿದ್ದಾರೆ.
ಚೀನೀ ಸೈನಿಕರು ಕೂಡ ಗೌರವದ ಅಂತ್ಯಸಂಸ್ಕಾರಕ್ಕೆ ಅರ್ಹರಾಗಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಚೀನಾ ಸರಕಾರವು ತಮ್ಮ ಮೇಲೆ ಕ್ರಮ ತೆಗೆದುಕೊಳ್ಳುವ ಭೀತಿಯಿಂದಾಗಿ ಜನರು ತೀವ್ರ ಟೀಕೆ ಮಾಡಲು ಹಿಂಜರಿಯುತ್ತಿದ್ದಾರೆ.
ಒಬ್ಬಾತನಂತೂ ಬರೆದಿದ್ದಾನೆ “ಭಾರತವು ಮಡಿದ ತನ್ನ ಸೈನಿಕರಿಗೆ ಗೌರವಪೂರ್ಣ ಅಂತ್ಯಸಂಸ್ಕಾರ ಏರ್ಪಡಿಸಿದೆ. ಇಡೀ ಭಾರತವು ತನ್ನ ಸೈನಿಕರಿಗೆ ತೋರುತ್ತಿರುವ ಗೌರವವು ಇದರಿಂದ ವ್ಯಕ್ತವಾಗಿದೆ. ಇಡೇ ದೇಶವು ಸೈನಿಕರ ಬೆಂಬಲಕ್ಕೆ ನಿಂತಿರುವುದನ್ನೂ ಇದು ತೋರಿಸುತ್ತಿದೆ. ಆದರೆ ನಮ್ಮಲ್ಲಿ ?  ನಾವು ಈ ವಿಷಯದಲ್ಲಿ ಭಾರತೀಯರಿಂದ ಕಲಿಯಬೇಕಾಗಿದೆ. ನಾವು ಕೂಡ ಮಡಿದ ನಮ್ಮ ಸೈನಿಕರಿಗೆ ಗೌರವ ಸಲ್ಲಿಸಬಾರದೇಕೆ ? ಎಷ್ಟು ಮಂದಿ ಚೀನೀ ಸೈನಿಕರು ಸತ್ತಿದ್ದಾರೆ? ಒಬ್ಬನೇ ಒಬ್ಬ ಸತ್ತಿಲ್ಲವೆಂದು ಖಂಡಿತವಾಗಿಯೂ ಹೇಳುವಂತಿಲ್ಲ. ಸರಕಾರ ಉತ್ತರಿಸುವುದೆ ?”

LEAVE A REPLY

Please enter your comment!
Please enter your name here