ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತೀಯ ನೌಕಾಸೇನೆಗೆ ಇನ್ನಷ್ಟು ಬಲ ತುಂಬಲು ಮೊತ್ತ ಮೊದಲ ಪೊಸೈಡಾನ್ 8i ಆಯಂಟಿ ಸಬ್ಮರೈನ್ ಏರ್ಕ್ರಾಫ್ಟ್ ಸೇರ್ಪಡೆಗೊಂಡಿದೆ.
2009ರ ಒಪ್ಪಂದದಂತೆ ಜಲಾಂತರ್ಗಾಮಿ ನೌಕೆಗಳ ಮೇಲೆ ಕಣ್ಣಿಡಲು ಅಮೆರಿಕದಿಂದ ಗೋವಾ ವಾಯುನೆಲೆಗೆ ಬಂದಿಳಿದಿದೆ.
ಭಾರತ 8 ವಿಮಾನಗಳನ್ನು ಪಡೆದ ಬಳಿಕ ಹೆಚ್ಚುವರಿಯಾಗಿ ಇನ್ನೂ 4 ವಿಮಾನಗಳಿಗೆ ಬೇಡಿಕೆ ಇಟ್ಟಿತ್ತು. ಈ ನಾಲ್ಕು ವಿಮಾನದಲ್ಲಿ ಇದೀಗ ಗೋವಾಗೆ ಬಂದಿಳಿದ ವಿಮಾನ ಮೊದಲನೆಯದಾಗಿದೆ. ಅಮೆರಿಕದಿಂದ ಖರೀದಿಸಲಾದ ಈ ಜಲಂತರ್ಗಾಮಿ ವಿರೋಧಿ ಏರ್ಕ್ರಾಫ್ಟ್, ಅತ್ಯಾಧುನಿಕ ಸೆನ್ಸಾರ್, ಕಡಲಲ್ಲಿ ವಿರೋಧಿಗಳ ಮೇಲೆ ಹದ್ದಿನ ಕಣ್ಣಿಡಬಲ್ಲದು.
ಭಾರತ 4 ಪೊಸೈಡಾನ್ 8i ಆಯಂಟಿ ಸಬ್ಮರೈನ್ ಏರ್ಕ್ರಾಫ್ಟ್ʼನ್ನ ಬರೋಬ್ಬರಿ 1.1 ಬೀಲಿಯನ್ ಅಮೆರಿಕನ್ ಡಾಲರ್(81,61,73,05,000 ರೂಪಾಯಿ) ನೀಡಿ ಖರೀದಿಸಿದೆ. ಈ ಏರ್ಕ್ರಾಫ್ಟ್ಗಳನ್ನ ಹಿಂದೂ ಮಹಾಸಾಗರದಲ್ಲಿ ಚೀನಾ ಯುದ್ದನೌಕೆ, ಸಬ್ ಮರಿನ್ ಮೇಲೆ ಹದ್ದಿನ ಕಣ್ಣಿಡಲು ನಿಯೋಜಿಸಲಾಗಿದೆ.