Monday, August 15, 2022

Latest Posts

ಭಾರತೀಯ ನೌಕಾಪಡೆಯ ಸೂಪರ್​ಸೋನಿಕ್ ಬ್ರಹ್ಮೋಸ್​ ಕ್ಷಿಪಣಿ ಪರೀಕ್ಷೆ ಯಶಸ್ವಿ

ಹೊಸದಿಲ್ಲಿ: ಭಾರತದ ಭೂಸೇನೆ ವಾಯುಸೇನೆಯಷ್ಟೇ ಅಲ್ಲ, ನೌಕಾಸೇನೆಯೂ ಕೂಡ ಶಕ್ತಿಶಾಲಿಯಾಗುತ್ತಿದೆ. ಇಂದು ಅರಬ್ಬೀ ಸಮುದ್ರದಲ್ಲಿ ಭಾರತೀಯ ನೌಕಾಪಡೆಯು ಸ್ಥಳೀಯವಾಗಿ ನಿರ್ಮಿಸಿದ ಸೂಪರ್​ ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ಈ ಕುರಿತು ಟ್ವೀಟ್ ಮಾಡಿರುವ ಡಿಆರ್‌ಡಿಒ, ‘ಬ್ರಹ್ಮೋಸ್, ಸೂಪರ್​ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು 2020ರ ಅಕ್ಟೋಬರ್ 18 ರಂದು ಭಾರತೀಯ ನೌಕಾಪಡೆಯ ಸ್ಥಳೀಯವಾಗಿ ನಿರ್ಮಿಸಿದ ಸ್ಟೆಲ್ತ್ ಡೆಸ್ಟ್ರಾಯರ್ ಐಎನ್‌ಎಸ್ ಚೆನ್ನೈನಿಂದ ಅರೇಬಿಯನ್ ಸಮುದ್ರದಲ್ಲಿದ್ದ ಗುರಿಯನ್ನು ಹೊಡೆಯಲಾಯಿತು’ಎಂದು ಹೇಳಿದೆ.

ಕ್ಷಿಪಣಿಯು ಉನ್ನತ ಮಟ್ಟದ ಮತ್ತು ಅತ್ಯಂತ ಸಂಕೀರ್ಣವಾದ ಕುಶಲತೆಯನ್ನು ಪ್ರದರ್ಶಿಸಿದ ಬಳಿಕ ಪಿನ್​ ಪಾಯಿಂಟ್​ ಪ್ರಖರತೆಯೊಂದಿಗೆ ನಿರ್ದಿಷ್ಟ ಗುರಿಯನ್ನು ತಲುಪಿದೆ.
ಪ್ರಧಾನ ಸ್ಟ್ರೈಕ್ ಅಸ್ತ್ರವಾಗಿ ಬ್ರಹ್ಮೋಸ್ ನೌಕಾ ಮೇಲ್ಮೈ ಗುರಿಗಳನ್ನು ದೀರ್ಘ ವ್ಯಾಪ್ತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುದ್ಧನೌಕೆಯ ಅಜೇಯತೆಯನ್ನು ಖಚಿತಪಡಿಸುತ್ತದೆ.
ಬ್ರಹ್ಮೋಸ್ ಅನ್ನು ‘ಪ್ರಧಾನ ದಾಳಿ ಅಸ್ತ್ರ’ ಎಂದು ಪರಿಗಣಿಸಲಾಗುವುದು, ಇದು ಯುದ್ಧನೌಕೆಯ ಅಜೇಯತೆಯನ್ನು ಖಚಿತಪಡಿಸುತ್ತದೆ. ಇದು ದೂರಗಾಮಿ ನೆಲೆಗಳಲ್ಲಿ ನೌಕಾ ಮೇಲ್ಮೈ ಗುರಿಗಳನ್ನು ನಿಯೋಜಿಸುತ್ತದೆ. ಇದರಿಂದಾಗಿ ಭಾರತೀಯ ನೌಕಾಪಡೆಯ ಮತ್ತೊಂದು ಬಲ ಬಂದಂತಾಗಿದೆ.
ಬ್ರಹ್ಮೋಸ್​ ಕ್ಷಿಪಣಿಯನ್ನು ಭಾರತ ಹಾಗೂ ರಷ್ಯಾ ಜಂಟಿಯಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ್ದು , ಭಾರತದಲ್ಲಿ ಮಿಸೈಲ್ ಉತ್ಪಾದನೆ ಮಾಡಲಾಗಿದೆ. ಇಂದು ಕ್ಷಿಪಣಿ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಹಾಗೂ ಭಾರತೀಯ ನೌಕಾಪಡೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಡಿಆರ್​ಡಿಓ ಅಧ್ಯಕ್ಷ ಡಾ. ಜಿ ಸತೀಶ್​ ರೆಡ್ಡಿ ಕೂಡ ವಿಜ್ಞಾನಿಗಳಿಗೆ ಹಾಗೂ ಸಿಬ್ಬಂದಿಗೆ ಅಭಿನಂದಿಸಿದ್ದಾರೆ. ಬ್ರಹ್ಮೋಸ್​ ಕ್ಷಿಪಣಿಯು ಹಲವಾರು ವಿಧದಲ್ಲಿ ಭಾರತೀಯ ಸಶಸ್ತ್ರಪಡೆಯ ಸಾಮರ್ಥ್ಯವನ್ನ ಹೆಚ್ಚಿಸಲಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss