Monday, August 8, 2022

Latest Posts

ಭಾರತೀಯ ಭದ್ರತಾ ಪಡೆಗಳಿಂದ ‘TRF’ ಕುಖ್ಯಾತ ಭಯೋತ್ಪಾದಕ ತಾಲಿಬ್ ಭಟ್ ಬಂಧನ

ಶ್ರೀನಗರ: ಕಾಶ್ಮೀರಿ ಕಣಿವೆಯಲ್ಲಿ ಭಾರತೀಯ ಭದ್ರತಾ ಪಡೆಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಟಿಆರ್ ಎಫ್ ನ ಕುಖ್ಯಾತ ಭಯೋತ್ಪಾದಕ ತಾಲಿಬ್ ಭಟ್ ನನ್ನು ಬಂಧಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ದೋರು ಪ್ರದೇಶದ ಪ್ರಾನ್ ಎಂಬಲ್ಲಿ ಭಾರತೀಯ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತಾಲಿಬ್‍ನನ್ನು ಬಂದಿಸಲಾಗಿದ್ದು, ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ತಾಲಿಬ್ ನನ್ನು ವಶಕ್ಕೆ ಪಡೆಯಲಾಗಿದೆ. ಆತನ ಬಳಿ ಇರುವ ಪಿಸ್ತೂಲ್, ಬುಲೆಟ್ ಗಳು ಹಾಗೂ ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಮತ್ತೊಬ್ಬ ಕುಖ್ಯಾತ ಭಯೋತ್ಪಾದಕ ಅಬ್ಬಾಸ್ ಶೇಕ್ ನ ಬಲಗೈ ಬಂಟನಾಗಿದ್ದ ತಾಲಿಬ್ ಭಟ್ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.ಈಗ ಕಪ್ರಾನ್ ಪ್ರದೇಶಗಳಲ್ಲಿ ಇರುವ ಖಚಿತ ವರ್ತಮಾನದ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ಬಂದಿಸಲಾಗಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss