ಹೊಸದಿಗಂತ ಆನ್ ಲೈನ್ ಡೆಸ್ಕ್:
ಹರಿಯಾಣದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಕೇಂದ್ರದಲ್ಲಿ ಭಾರತೀಯ ಭದ್ರತಾ ಸಿಬ್ಬಂದಿಗಳ ಜೊತೆ ಕರ್ತವ್ಯ ನಿರ್ವಹಿಸುವ ನಾಯಿ ಮರಿಗಳಿಗೆ ದೇಶೀಯವಾಗಿಯೇ ನಾಮಕರಣ ಮಾಡಲಾಯಿತು.
ಬೆಲ್ಜಿಯಂ ಶೆಫರ್ಡ್ ತಳಿಯ 16 ನಾಯಿ ಮರಿಗಳ ನಾಮಕರಣ ಸಮಾರಂಭ ಹರಿಯಾಣದ ಪಂಚಕುಲದಲ್ಲಿರುವ ಐಟಿಬಿಪಿ ಕೇಂದ್ರದಲ್ಲಿ ನಡೆಯಿತು.
ಸಾಸೋಮಾ, ದೌಲತ್, ಶ್ಯೋಕ್, ಚೈನ್ಚೈನೊ, ಗಾಲ್ವಾನ್, ಅನಿಲಾ, ಚುಂಗ್ ಥಂಗ್, ಮುಖ್ಪಾರಿ, ಯುಲು, ಸುಲ್ತಾನ್ ಚುಸ್ಕು, ಸಾಶರ್, ಶ್ರೀಜಲ್, ಚಾರ್ಡಿಂಗ್, ಇಮಿಸ್, ಚಿಪ್ ಚಾಪ್, ಮತ್ತು ರೆಜಾಂಗ್ ಹೆಸರುಗಳನ್ನು ಭದ್ರತಾ ಸಿಬ್ಬಂದಿಗಳ ಜೊತೆ ಕರ್ತವ್ಯ ನಿರ್ವಹಿಸುವ ನಾಯಿ ಮರಿಗಳಿಗೆ ಹೆಸರಿಡಲಾಗಿದೆ.