ಭಾರತೀಯ ಮೂಲದ ಸೂಕ್ಷ್ಮಾಣು ತಜ್ಞೆ ಗೀತಾ ರಾಮ್ ಜಿ ದಕ್ಷಿಣ ಆಫ್ರಿಕಾದಲ್ಲಿ ನಿಧನ

0
114

ಜೊಹಾನ್ಸ್ ಬರ್ಗ್: ಭಾರತೀಯ ಮೂಲದ ಸೂಕ್ಷ್ಮಾಣು ತಜ್ಞೆ ಗೀತಾ ರಾಮ್ ಜೀ ಕೊರೋನಾ ಸೋಂಕಿನಿಂದ ದಕ್ಷಿಣ ಆಫ್ರಿಕಾದಲ್ಲಿ ಸಾವನ್ನಪ್ಪಿದ್ದಾರೆ.

64 ವರ್ಷದ ಗೀತಾ ರಾಮ್ ಜೀ ಅವರು ಲಸಿಕೆ ವಿಜ್ಞಾನಿ ಮತ್ತು ಎಚ್ ಐವಿ ತಡೆ ಸಂಶೋಧಕಿಯಾಗಿದ್ದರು. ಕೆಲವು ದಿನಗಳ ಹಿಂದೆ ಅವರಿಗೆ ಕೊರೋನಾ ಸೋಂಕಿನ ಪರೀಕ್ಷೆ ನಡೆದಿದ್ದು, ಅವರಿಗೆ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ವರದಿ ತಿಳಿಸಿದೆ.

ಪ್ರೊ.ಗೀತಾ ರಾಮ್ ಅವರು ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸಂತಾಪ ಸೂಚಿಸಿದ ಎಸ್ ಎಎಂ ಆರ್ ಸಿ ಅಧ್ಯಕ್ಷ, ಸಿಇಒ ಗ್ಲೆಂಡಾ ಗ್ರೈ ಅವರು, ಇದೊಂದು ನೋವಿನ ಸಂಗತಿಯಾಗಿದೆ ಎಂದಿದ್ದಾರೆ.

ಕೊರೋನಾ ವೈರಸ್ ಗೆ ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ 5ಮಂದಿ ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here