ಬೆಂಗಳೂರು: 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನವು ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿದ್ದು, ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದ್ದಾರೆ. ಐದು ದಿನ ನಡೆಯಲಿರುವ ಈ ಸಮ್ಮೇಳನವು, ಗ್ರಾಮೀಣಾಭಿವೃದ್ದಿ,ವಿಜ್ಞಾನ, ತಂತ್ರಜ್ಞಾನಗಳ ವಿಚಾರಗಳನ್ನು ಒಳಗೊಂಡಿದೆ.
ಐದು ದಿನದ ಸಮ್ಮೇಳನದಲ್ಲಿ ನೋಬಲ್ ಪುರಸ್ಕೃತರಾದ ಜರ್ಮನಿಯ ಪ್ರೊ. ಸ್ಟೀಫನ್ ಹೆಲ್, ಇಸ್ರೇಲ್ ಪ್ರೊ. ಅಡಾ ಇಯೋನಾಥ್ ಅವರ ಗೋಷ್ಠಿಗಳಿರುವುದು. 1500ಕ್ಕೂ ಅಧಿಕ ಪ್ರತಿನಿಧಿಗಳು ಭಾಗಿಯಾಗಲಿದ್ದು, 150ಕ್ಕೂ ಹೆಚ್ಚು ಸಂಘಟನೆಗಳು ಜೊತೆ ಸೇರಲಿದೆ. ಸಮೇಳನದಲ್ಲಿ ಕೃಷಿ ಸಂಕಷ್ಟ, ಹವಾಮಾನ ಬದಲಾವಣೆ, ಆರೋಗ್ಯ, ಪರಿಸರ ಮತ್ತು ಇಂಧನ ಕ್ಷೇತ್ರ ಮತ್ತು ಹಲವಾರು ಸಮಾಜಕ್ಕೆ ಪ್ರಮುಖವಾದ ವಿಚಾರಗಳ ಕುರಿತು ಚರ್ಚ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೃಷಿ ವಿವಿಯ ಉಪಕುಲಪತಿ ಎಸ್.ರಾಜೇಂದ್ರ ಪ್ರಸಾದ್ ಅರಮನೆಯ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿಯ ಹರ್ಷವರ್ಧನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.