21ನೇ ಶತಮಾನದ ಜನರಿಗೆ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದ ಕುರಿತು ಸಂಪೂರ್ಣ ಮಾಹಿತಿ ಇಲ್ಲದ ಕಾರಣ ಅವರಿಗೆ ಸುಲಭವಾಗಿರುವ ಪಾಶ್ಚಾತ್ಯ ಸಂಪ್ರದಾಯಗಳಿಗೆ ಮಾರು ಹೋಗಿದ್ದಾರೆ. ಆದರೆ ಭಾರತೀಯ ಸಂಪ್ರದಾಯಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳನ್ನು ಅರಿಯೋಣ ಬನ್ನಿ
ಮೆಹೆಂದಿ: ಶುಭ ಸಮಾರಂಭಗಳಲ್ಲಿ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಕೈಗೆ ಮೆಹೆಂದಿ ಹಾಕಲಾಗುತ್ತದೆ. ಆದರೆ ಇದರಿಂದ ನಮ್ಮ ದೇಹದ ಉಷ್ಣಾಂಶ ಕಡಿಮೆ ಮಾಡಲಿದ್ದು, ಟೆನ್ಷನ್ ಕಡಿಮೆ ಮಾಡಲಿದೆ.
ನಮಸ್ತೆ ಮಾಡುವುದು: ಭಾರತೀಯ ಸಂಸ್ಕೃತಿ ಇದೀಗ ಇಡೀ ವಿಶ್ವಕ್ಕೆ ಪರಿಚಯವಾಗಿದೆ. ಆದರೆ ಈ ನಮಸ್ತೆಯಿಂದ ಇದು ಕಣ್ಣುಗಳು, ಕಿವಿಗಳು ಮತ್ತು ಮನಸ್ಸಿನಲ್ಲಿನ ಒತ್ತಡದ ಬಿಂದುಗಳೊಂದಿಗೆ ಸಂಪರ್ಕ ಹೊಂದಿದೆ. ಅವುಗಳನ್ನು ಒಟ್ಟಿಗೆ ಒತ್ತುವುದರಿಂದ ಇವುಗಳನ್ನು ಸಕ್ರಿಯಗೊಳಿಸುತ್ತದೆ, ಆ ವ್ಯಕ್ತಿಯನ್ನು ದೀರ್ಘಕಾಲ ನೆನಪಿಟ್ಟುಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
ಕಾಲುಂಗುರ: ಭಾರತೀಯ ಸಂಸ್ಕೃತಿಯ ಪ್ರಕಾರ ವಿವಾಹವಾದ ಪ್ರತಿ ಮಹಿಳೆಯು ಕಾಲಿನ ಬೆರಳಿಗೆ ಕಾಲುಂಗುರ ಧರಿಸುತ್ತಾರೆ. ಕಾಲುಂಗುರ ಧರಿಸುವುದರಿಂದ ಹೃದಯ ಹಾಗೂ ಗರ್ಭಕೋಶಕ್ಕೆ ಸಂಬಂಧಿಸಿದ ನರಕ್ಕೆ ಶಕ್ತಿ ನೀಡಲಿದ್ದು, ಮಹಿಳೆಯರ ಮುಟ್ಟಿನ ಸಮಸ್ಯೆ ಪರಿಹಾರವಾಗಲಿದೆ.
ಕುಂಕುಮ: ಹಣೆಯ ಮೇಲೆ ಹುಬ್ಬುಗಳ ನಡಯವೆ ಕುಂಕುಮ ಇಡುವುದು ಭಾರತೀಯ ಸಂಪ್ರದಾಯ ಇದರಿಂದ ಹುಬ್ಬುಗಳ ನಡುವೆ ಇರುವ ಪ್ರೋಸುರಸ್ ಎಂಬ ಪ್ರಮುಖ ನರಕ್ಕೆ ಶಕ್ತಿ ನೀಡಲಿದೆ. ಕುಂಕುಮ ಇಡುವುದರಿಂದ ನಕಾರಾತ್ಮಕ ಶಕ್ತಿಗೆ ವ್ಯಕತಿ ಆಕರ್ಷಿಕನಾಗುವುದಿಲ್ಲ ಎಂದು ಹೇಳಲಾಗಿದೆ.
ದೇವಸ್ಥಾನದಲ್ಲಿರುವ ಘಂಟೆ: ಈ ಘಂಟೆಗಳು ಉತ್ಪಾದಿಸುವ ಶಬ್ದವು ನಮ್ಮ ಮಿದುಳಿನ ಎಡ ಮತ್ತು ಬಲ ಭಾಗಗಳಲ್ಲಿ ಏಕತೆಯನ್ನು ಉಂಟುಮಾಡಲಿದ್ದು, ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಕಿವಿ ಓಲೆ: ಕಿವಿ ಚುಚ್ಚಿಸಿ ಓಲೆ ಹಾಕುವುದರಿಂದ ಬುದ್ಧಿಶಕ್ತಿ, ಆಲೋಚನಾ ಶಕ್ತಿ ಮತ್ತು ನಿರ್ಧಾರ ಕೈಗೊಳ್ಳುವ ಶಕ್ತಿ ವೃದ್ಧಿಸುತ್ತದೆ.
ಪಾದ ಮುಟ್ಟಿ ನಮಸ್ಕಾರ ಮಾಡುವುದು: ನೀವು ವಯಸ್ಸಾದವರ ಪಾದಗಳನ್ನು ಮುಟ್ಟಿದಾಗ, ಅವರ ಹೃದಯಗಳು ಸಕಾರಾತ್ಮಕ ಆಲೋಚನೆಗಳು ಮತ್ತು ಶಕ್ತಿಯನ್ನು ಹೊರಸೂಸುತ್ತವೆ, ಅದು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ಹರಡುತ್ತದೆ. ಇದರಿಂದ ಹಿರಿಯಲ್ಲಿರುವ ಸಕಾರಾತ್ಮಕ ಶಕ್ತಿ ನಮಗೆ ಬರಲಿದೆ.
ಬಳೆ ಹಾಕುವುದು: ಬಳೆಗಳು ಮಣಿಕಟ್ಟಿನೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.