ಭಾರತೀಯ ಸೇನೆಗೆ ಈಗ ಕೇಂದ್ರದ ಆರ್ಥಿಕ ಬಲ ಸಾಥ್: 500 ಕೋಟಿ ರೂ.ಗಳ ವರೆಗೂ ಶಸ್ತ್ರಾಸ್ತ್ರ ಖರೀದಿಗೆ ಅಸ್ತು

0
122

ನವದೆಹಲಿ: ಚೀನಾ ಸದೆಬಡಿಯಲು ಅನುಕೂಲವಾಗುವಂತೆ ಸೇನೆಗೆ 500 ಕೋಟಿ ರೂ.ಗಳ ವರೆಗೂ ತುರ್ತು ಶಸ್ತ್ರಾಸ್ತ್ರ ಖರೀದಿಗೆ ಕೇಂದ್ರ ಸರಕಾರ ಅನುಮತಿ ನೀಡಿದ್ದು, ಭಾರತೀಯ ಸೈನಿಕರಲ್ಲಿ ರಣೋತ್ಸಾಹ ಮತ್ತಷ್ಟು ಹೆಚ್ಚಾಗಿದೆ.
ಅನುಮತಿ ಸಿಕ್ಕ ಬೆನ್ನಲ್ಲೇ ಎಲ್ಲಾ ಸೇನಾ ವಿಭಾಗಗಳು ತುರ್ತು ಸಂದರ್ಭದಲ್ಲಿ ಬೇಕಾಗುವ ವಸ್ತುಗಳನ್ನ ಶೀಘ್ರವಾಗಿ ಖರೀದಿಸಲು ಸಿದ್ಧತೆ ನಡೆಸುತ್ತಿವೆ ಎನ್ನಲಾಗಿದೆ. ಗಡಿಯಲ್ಲಿ ಚೀನಾ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಯೋಧರ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ಕೇಂದ್ರ ಮುಂದಾಗಿದ್ದು, ಸೇನೆಗೆ ಈಗ ಕೇಂದ್ರ ಸರ್ಕಾರದ ಆರ್ಥಿಕ ಬಲವೂ ಜೊತೆಯಾಗಿದೆ.
ಈಗಾಗಲೇ ಸೇನಾ ಬಜೆಟ್ ನಲ್ಲಿ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳು ಸೇರಿದಂತೆ ಹಲವು ಬಗೆಯ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದೆ. ಅಮೆರಿಕ ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳನ್ನು ಕೂಡ ಖರೀದಿ ಮಾದಲಾಗಿದೆ. ನೌಕಾಪಡೆಗೆ ಬೇಕಾದ ಹಲವು ಬಗೆಯ ಯುದ್ಝನೌಕೆಗಳು ಮುಂಬೈ ಡಾಕ್ ಯಾರ್ಡ್ ನಲ್ಲಿ ಸಿದ್ಧಪಡಿಸಲಾಗುತ್ತಿದೆ.

LEAVE A REPLY

Please enter your comment!
Please enter your name here