Monday, August 15, 2022

Latest Posts

ಭಾರತೀಯ ಸೇನೆಯ ಅತ್ಯುನ್ನತ ಹುದ್ದೆ ಲೆಫ್ಟಿನಂಟ್ ಜನರಲ್ ಆಗಿ ಡಾ.ಮಾಧುರಿ‌ ಕಾನಿಟ್ಕರ್

ನವದೆಹಲಿ: ಡಾ.ಮಾಧುರಿ‌ ಕಾನಿಟ್ಕರ್ ಭಾರತೀಯ ಸೇನೆಯ ಅತ್ಯುನ್ನತ ಹುದ್ದೆ ಲೆಫ್ಟಿನಂಟ್ ಜನರಲ್ ಆಗಿ ಬಡ್ತಿ ಪಡೆದಿದ್ದಾರೆ.

ಇವರು ಧಾರವಾಡದ ದರೋಗಾ ಓಣಿಯಲ್ಲಿ ಗೋಪಾಲರಾವ್‌ ಖೋತ ಹಾಗೂ ಹೇಮಲತಾ ಖೋತ ಎಂಬ ದಂಪತಿಯ ಮಗಳಾಗಿ 1961 ರಲ್ಲಿ ಮಾಧುರಿ ಜನಿಸಿದರು. ಇವರು ಸರಳಾದೇವಿ‌ ಖೋತ್ ಎಂಬ ವೈದ್ಯರ ಮೊಮ್ಮಗಳು. ಡಾ.‌ಮಾಧುರಿ, ವೃತ್ತಿಯಲ್ಲಿ ಶಿಶು ವೈದ್ಯೆ ಆಗಿದ್ದಾರೆ.

“ಧಾರವಾಡದಿಂದ 40 ವರ್ಷಗಳ ಹಿಂದೆಯೇ ಇವರ ಕುಟುಂಬ ಪುಣೆಗೆ ಶಿಫ್ಟ್​ ಆಯಿತು. ಹೀಗಾಗಿ ಡಾ.‌ಮಾಧುರಿ ಅವರ ಎಲ್ಲ ಶಿಕ್ಷಣ ಪುಣೆಯಲ್ಲೇ ಆಗಿದೆಬಳಿಕ ಅಲ್ಲಿಯೇ ಆರ್ಮಿ‌ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್​ನಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಬಳಿಕ ಆರ್ಮಿಯಲ್ಲಿ ವೈದ್ಯಾಧಿಕಾರಿ ಆಗಿ ಆಯ್ಕೆಯಾದರು. ಹಾಗೆಯೇ ಭಾರತೀಯ ಸೇನೆಯ ವೈದ್ಯಕೀಯ ವಿಭಾಗದಲ್ಲಿ ವಿವಿಧ ಹುದ್ದೆ ಅಲಂಕರಿಸಿ ಈಗ ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss