ಹೊಸದಿಗಂತ ಆನ್ ಲೈನ್ ಡೆಸ್ಕ್:
ದೀಪಾವಳಿ ಹಬ್ಬದ ಅಂಗವಾಗಿ ರಾಜಸ್ಥಾನದ ಜೈಸಲ್ಮೇರ್ನ ಲಾಂಗ್ವಾಲಾದ ಯೋಧರ ಜೊತೆ ಹಬ್ಬ ಆಚರಿಸಿದ ಪ್ರಧಾನಿ ಮೋದಿ, ಯೋಧರ ಶೌರ್ಯ ಹಾಗೂ ತ್ಯಾಗಕ್ಕೆ ಧನ್ಯವಾದ ತಿಳಿಸಿದರು.
ಭಾರತೀಯ ಸೈನಿಕರಿಗೆ ಸವಾಲೆಸಗುವವರಿಗೆ ಸೂಕ್ತ ಉತ್ತರ ನೀಡುವ ಶಕ್ತಿ ಭಾರತಕ್ಕಿದೆ. ವಿಶ್ವದ ಯಾವುದೇ ಶಕ್ತಿಯ ವಿರುದ್ಧವಾದರೂ ನಮ್ಮ ಸೈನಿಕರು ಗಡಿಯನ್ನು ರಕ್ಷಿಸುತ್ತಾರೆ ಎಂದು ಹೇಳಿದರು.
ದೇಶದ ಜನತೆ ಸದಾ ಸೇವೆಯ ಜೊತೆಗಿದ್ದಾರೆ. ಭಾರತೀಯ ಯೋಧರ ಶೌರ್ಯ, ಸಾಮರ್ಥ್ಯದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಇದೆ. ರಕ್ಷಣಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಭಾರತ ಕಾರ್ನಿರ್ವಹಿಸುತ್ತಿದ್ದು, ಆತ್ಮ ನಿರ್ಭರ ಭಾರತದ ಕನಸು ನನಸು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈವೇಳೆ ಭಾರತೀಯ ಯೋಧರಿಗೆ ಮೂರು ಬೇಡಿಕೆಗಳನ್ನು ಮುಂದಿಟ್ಟ ಪ್ರಧಾನಿ ಮೋದಿ, ಸೈನಿಕರನ್ನು ಹೊಸತನದ ಮೂಲಕ ಜಾಣ್ಮೆ ಮುಂದುವರೆಸುವುದು, ಯೋಗ ಅಭ್ಯಾಸ ಮಾಡುವುದು ಹಾಗೂ ಕೊನೆಯದಾಗಿ ಮಾತೃಭಾಷೆ ಹಾಗೂ ಇಂಗ್ಲಿಷ್ ಹೊರತುಪಡೆಸಿ ಬೇರೆ ಭಾಷೆ ಕಲಿಯಬೇಕು. ಇದರಿಂದ ಯೋಧರಿಗೆ ಉತ್ಸಾಹ ತುಂಬಲು ಸಾಹಾಯವಾಗುತ್ತದೆ ಎಂದರು.
ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂ.ಎಂ.ನರವನೆ ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮಹಾನಿರ್ದೇಶಕ ರಾಕೇಶ್ ಅಸ್ತಾನಾಲ್ಸೊ ಅವರು ಪ್ರಧಾನಿ ಮೋದಿ ಜೊತೆಯಲ್ಲಿದ್ದರು.