ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆಗಾಗಿ ವಿಶ್ವದ 25 ರಾಷ್ಟ್ರಗಳು ಬೇಡಿಕೆ ಇಟ್ಟಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜಯಶಂಕರ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಈಗಾಗಲೇ 15 ರಾಷ್ಟ್ರಗಳಿಗೆ ಲಸಿಕೆ ಪೂರೈಸಿದ್ದು, ಇನ್ನೂ 25 ರಾಷ್ಟ್ರಗಳೂ ಲಸಿಕೆಗಾಗಿ ಬೇಡಿಕೆ ನೀಡಿದೆ. 25 ರಾಷ್ಟ್ರಗಳಲ್ಲಿ ಬಡ ರಾಷ್ಟ್ರ, ಬೆಲೆ ಸೂಕ್ಷ್ಮ ರಾಷ್ಟ್ರಗಳು ಹಾಗೂ ಇತರೆ ದೇಶಗಳಾಗಿ ಮೂರು ವರ್ಗಗಳಿವೆ. ಇತರೆ ದೇಶಗಳ ಅಡಿಯಲ್ಲಿ ಬರುವ ರಾಷ್ಟ್ರಗಳು ಲಸಿಕಾ ತಯಾರಕಾ ಸಂಸ್ಥೆಯೊಂದಿಗೆ ನೇರ ಸಂಪರ್ಕ ಹೊಂದಿರುತ್ತವೆ ಎಂದರು.
ಭಾರತ ವಿಶ್ವಕ್ಕೆ ಕೊರೋನಾ ಲಸಿಕೆ ನೀಡುವ ಮೂಲಕ ಜಗತ್ತಿನಲ್ಲಿ ಭಾರತದ ಭಾವುಟ ಉತ್ತುಂಗಕ್ಕೇರಿದೆ. ಭಾರತ ಅಣೆಕ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆಗಳನ್ನು ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜ.16ರಂದು ದೇಶದಲ್ಲಿ ಸ್ವದೇಶಿ ಕೊರೋನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ದೊರಕಿದ್ದು, ಕೋವ್ಯಾಕ್ಸಿನ್ ಮತ್ತು ಕೋವೀಶೀಲ್ಡ್ ಲಸಿಕೆಗಳನ್ನು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿದೆ.