Monday, July 4, 2022

Latest Posts

ಭಾರತ – ಅಮೆರಿಕವನ್ನು ಕೆಣಕಿದವರಿಗೆ ಕಾದಿದೆ ತಕ್ಕ ಶಾಸ್ತಿ: ಜಗತ್ತಿಗೇ ಟ್ರಂಪ್ ಎಚ್ಚರಿಕೆ

ಅಹಮದಾಬಾದ್: ಭಾರತ ಮತ್ತು ಅಮೆರಿಕವನ್ನು ಕೆಣಕಿದವರಿಗೆ ತಕ್ಕ ಶಾಸ್ತಿ ಖಂಡಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿಗೇ ಎಚ್ಚರಿಕೆ ನೀಡಿದ್ದಾರೆ.

ಎರಡು ದಿನಗಳ ಭಾರತ ಪ್ರವಾಸದ ಹಿನ್ನೆಲೆಯಲ್ಲಿ ಸೋಮವಾರ ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಿದ್ದ ಡೊನಾಲ್ಡ್ ಟ್ರಂಪ್, ವಿಶ್ವದ ಅತೀ ದೊಡ್ಡ ಕ್ರೀಡಾ ಮೈದಾನ ಖ್ಯಾತಿಯ ಮೊಟೆರಾದಲ್ಲಿ ಆಯೋಜಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ, ಭಾರತ ಮತ್ತು ಅಮೆರಿಕ ನಡುವೆ ಭಾರತ ಸೇನಾಪಡೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಮಾರಾಟ ಮಾಡುವ 3 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 20ಸಾವಿರ ಕೋಟಿ ರೂಪಾಯಿ) ಒಪ್ಪಂದ ನಡೆಯಲಿದೆ ಎಂದು ಅವರು ಘೋಷಿಸಿದ್ದಾರೆ.

ರಕ್ಷಣಾ ಸಹಕಾರ ಅಬಾಧಿತ: ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರ ಹೀಗೆಯೇ ಮುಂದುವರಿಯಲಿದೆ. ನಾವು ಈಗಾಗಲೇ ಹಲವು ಆಧುನಿಕ ಶಸ್ತ್ರಾಸ್ತ್ರ ತಯಾರಿಸಿದ್ದೇವೆ. ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಬೃಹತ್ ಒಪ್ಪಂದ ನಡೆಯಲಿದೆ. ಭಾರತಕ್ಕೆ ನಾವು ಅತ್ಯಾಧುನಿಕ ಸೇನಾ ಶಸ್ತ್ರಾಸ್ತ್ರ ಮಾರಾಟ ಮಾಡಲು ಎದುರು ನೋಡುತ್ತಿದ್ದೇವೆ ಎಂದು ಟ್ರಂಪ್ ಹೇಳಿದರು.

ಇಸ್ಲಾಮಿಕ್ ಉಗ್ರವಾದದ ವಿರುದ್ಧ ಜಂಟಿ ಹೋರಾಟ: ಇಸ್ಲಾಮಿಕ್ ಉಗ್ರವಾದದ ವಿರುದ್ಧ ಉಭಯ ದೇಶಗಳು ಹೋರಾಟ ನಡೆಸಲಿದೆ. ಐಸಿಸ್ ಉಗ್ರ ಸಂಘಟನೆಯನ್ನು ಅಮೆರಿಕ ಈಗಾಗಲೇ ಮಟ್ಟ ಹಾಕಿದೆ. ಪಾಕಿಸ್ತಾನದಲ್ಲಿರುವ ಉಗ್ರರನ್ನು ಮಟ್ಟ ಹಾಕುವಂತೆ ಕೂಡಾ ಅಮೆರಿಕ ಒತ್ತಡ ಹೇರಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss