ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾಕ್ಸಿಂಗ್ ಡೇ ಎರಡನೇ ಟೆಸ್ಟ್ ನಾಳೆ ನಡೆಯಲಿದ್ದು, ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದ್ದು, ಆಸ್ಟ್ರೇಲಿಯಾ ಮೊದಲ ಟೆಸ್ಟ್ ತಂಡದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ವೇಗಿ ಮಹಮ್ಮದ್ ಸಿರಾಜ್ ಟೆಸ್ಟ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ವೇಳೆ ಕಳಪೆ ಪ್ರದರ್ಶನ ತೋರಿದ ಪೃಥ್ವಿ ಶಾ, ಮತ್ತು ಸಹಾ ತಂಡದಿಂದ ಹೊರಬಿದ್ದಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಹೊಣೆ ಅಜಿಂಕ್ಯ ರಹಾನ್ ಹೆಗಲಿಗೆ ಬಿದ್ದಿದೆ. ನಿರೀಕ್ಷೆಯಂತೆ ರವೀಂದ್ರ ಜಡೇಜಾ ಹಾಗು ರಿಷಬ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ 11:
ಅಜಿಂಕ್ಯ ರಹಾನೆ (ನಾಯಕ),ಮಯಾಂಕ್ ಮಯಾಂಕ್ ಅಗರವಾಲ್, ಶುಭಮನ್ ಗಿಲ್, ಚೇತೇಶ್ವರ ಪುಜಾರ,,ಹನುಮ ವಿಹಾರಿ,ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾಆರ್.ಅಶ್ವಿನ್ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾಮಹಮ್ಮದ್ ಸಿರಾಜ್.