Sunday, August 14, 2022

Latest Posts

ಭಾರತ ಕೇಂದ್ರಿತ ಶಿಕ್ಷಣದತ್ತ ಹೊರಳುವುದೇ ನೂತನ ಶಿಕ್ಷಣ ನೀತಿ: ಪ್ರೊ.ಕಟ್ಟಿಮನಿ

ಮಂಗಳೂರು: ಇಂಡಿಯಾ ಶಿಕ್ಷಣದಿಂದ ಭಾರತ ಕೇಂದ್ರಿತ ಶಿಕ್ಷಣದತ್ತ ಹೊರಳುವುದೇ ರಾಷ್ಟ್ರೀಯ ಶಿಕ್ಷಣದ ಪ್ರಮುಖ ಉದ್ದೇಶ ಎಂದು ಆಂಧ್ರ ಪ್ರದೇಶದ ಕೇಂದ್ರ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯ ಪ್ರೊ.ಟಿ.ವಿ.ಕಟ್ಟಿಮನಿ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಹಾಗೂ ಮಂಗಳೂರು ಮತ್ತು ಬೆಂಗಳೂರಿನ ಸೆಂಟರ್ ಫಾರ್ ಎಜುಕೇಶನಲ್ ಆಂಡ್ ಸೋಶಿಯಲ್ ಸ್ಟಡೀಸ್ ಇದರ ಹಯೋಗದಲ್ಲಿ ಸೋಮವಾರ, ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ಪದ್ಧತಿ ಜಾರಿ ಕುರಿತಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿಯ ಜೊತೆಜೊತೆಗೆ ಇಡೀ ಸಮಾಜವನ್ನು ಉನ್ನತಿಯೆಡೆಗೆ ಕೊಂಡೊಯ್ಯುವಲ್ಲಿ ವಿಶ್ವವಿದ್ಯಾನಿಲಯಗಳು ಶ್ರಮಿಸಬೇಕಾಗುತ್ತದೆ. ಉಪನ್ಯಾಸಕ ವರ್ಗಕ್ಕೆ ಸಂಶೋಧನೆ ಕಡೆಗೆ ಪ್ರೋತ್ಸಾಹನೀಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲೆ ಬಿಡುತ್ತಿರುವ ಮಕ್ಕಳು, ಮಹಿಳಾ ಶಿಕ್ಷಣ, ಗ್ರಾಮೀಣ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತದೆ. ಒಟ್ಟಾರೆ ಇದು ಬದುಕಿನ ಎಲ್ಲಾ ದೃಷ್ಟಿಕೋನಗಳ ಕುರಿತಾಗಿಯೂ ಬೆಳಕುಚೆಲ್ಲುತ್ತದೆ ಎಂದವರು ಹೇಳಿದರು. ಮಕ್ಕಳಲ್ಲಿ ಕೌಶಲ್ಯಗಳನ್ನು ಬೆಳೆಸುವ ಜೊತೆ ಜೊತೆಗೆ ಉದ್ಯೋಗಾಧಾರಿತ, ತರಬೇತಿ ಕೇಂದ್ರಿತ ಬೋಧನೆ ವ್ಯವಸ್ಥೆಗೆ ಮಹತ್ವನೀಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಥಾವತ್ತಾಗಿ ಜಾರಿಗೊಳಿಸಿದ್ದೇ ಆದಲ್ಲಿ ಇಡೀ ಜಗತ್ತೇ ಭಾರತವನ್ನು ನೋಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಟ್ಟಿಮನಿ ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಮಾತನಾಡಿ, ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ವಿಶ್ವವಿದ್ಯಾನಿಲಯ ೯ ಸಮಿತಿಗಳನ್ನು ರಚಿಸಲಿದೆ. ಅದಕ್ಕೂ ಮೊದಲು ನೀತಿಯ ಕುರಿತು ಜಾಗೃತಿ ಮೂಡಿಸಲು ಸರಣಿ ಕಾರ್ಯಾಗಾರಗಳನು ಹಮ್ಮಿಕೊಂಡು, ಕಾರ್ಯಸೂಚಿಯೊಂದಿಗೆ ಸವಾಲನ್ನು ಸಮರ್ಥವಾಗಿ ಎದುರಿಸಲು ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss