Tuesday, July 5, 2022

Latest Posts

ಭಾರತ- ಚೀನಾ ಗಡಿಯಿಂದ ಹೆಚ್ಚುವರಿ ಸೈನಿಕರ ಹಿಂತೆಗೆತ| ಇಂದು ಉಭಯ ರಾಷ್ಟ್ರಗಳ ಮಿಟಿಟರಿ ಸಭೆ

ಹೊಸದಿಲ್ಲಿ: ಲಡಾಖ್ ಗಡಿಯಿಂದ ಹೆಚ್ಚುವರಿ ಸೇನೆ ಹಿಂಪಡೆಯುವ ಕುರಿತು ಭಾರತ- ಚೀನಾ ಇಂದು ಮತ್ತೊಂದು ಸುತ್ತಿನ ಮಿಲಿಟರಿ ಸಭೆ ನಡೆಸಲಿದೆ.

ಗಡಿ ಬಿಕ್ಕಟ್ಟನ್ನು ಬಗೆಹರಿಸಲು ಸಭೆ ನಡೆಸುತ್ತಿದ್ದು, ಈಗಾಗಲೇ ಕಳೆದ ತಿಂಗಳು 17ನೇ ಸುತ್ತಿನ ಮಾತುಕತೆ ನಡೆಸಲಾಗಿದೆ. ಕಳೆದ ಸಭೇಯಲ್ಲಿ ಉಭಯ ರಾಷ್ಟ್ರಗಳು ತಮ್ಮ ನಿಯೋಜಿತ ಹೆಚ್ಚುವರಿ ಸೇನೆಯನ್ನು ಭಾರತ ಹಾಗೂ ಚೀನಾ ಗಡಿ ನಿಯಂತ್ರಣ ರೇಖೆಯಿಂದ ಹಿಂಪಡೆಯುವುದಕ್ಕೆ ಸಮ್ಮತಿ ನೀಡಿತ್ತು. ಆದರೂ ಚೀನಾ ಡೆಪ್ಸಾಂಗ್ ಪ್ರದೇಶ, ಫಿಂಗರ್ ಏರಿಯಾ ಮತ್ತು ಗೋಗ್ರಾ ಪ್ರದೇಶಗಳಲ್ಲಿ ಚೀನಾದ ಸೈನಿಕರು ಬೇರೂರಿರುವ ಬೆನ್ನಲ್ಲೇ ಈಗ ಮತ್ತೊಂದು ಸಭೆ ನಡೆಸಲಾಗುತ್ತಿದೆ.

ಕಳೆದ 3 ತಿಂಗಳಿಂದ ಚೀನೀ ಸೈನಿಕರನ್ನು ಫಿಂಗರ್ ಪ್ರದೇಶದಲ್ಲಿ ನಿಯೋಜಿಸಲಾಗಿದ್ದು, ಸ್ಥಳದಲ್ಲಿ ಸಂಗರ್ಸ್ ಮತ್ತು ಬಂಕರ್ಸ್ ಗಳನ್ನು ನಿರ್ಮಾಣ ಮಾಡುತ್ತಿದೆ. ಕಳೆದ ಬಾರಿ ಸಭೆಯ ನಂತರ ಗಡಿಯಲ್ಲಿನ ಸೈನಿಕರನ್ನು ಪೂರ್ಣ ಹಿಂಪಡಿಯುವಿಕೆಗೆ ಸಮ್ಮತಿ ನೀಡಿದ್ದು, ಈ ಬಗ್ಗೆ ಭಾರತ ವಿಶ್ವಾಸ ವ್ಯಕ್ತಪಡಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss