ಭಾರತ-ಚೀನಾ ಗಡಿ ಬಿಕ್ಕಟ್ಟು| ಬಿಎಸ್ಪಿ ಪಕ್ಷದ ಬೆಂಬಲ ಬಿಜೆಪಿಗೆ: ಮಾಯಾ

0
157

ಹೊಸದಿಲ್ಲಿ: ಭಾರತ-ಚೀನಾ ಗಡಿ ಬಿಕ್ಕಟ್ಟು ವಿಷಯಕ್ಕೆ ಸಂಬಂಸಿ ತನ್ನ ಪಕ್ಷ ಬಿಜೆಪಿ ಜೊತೆ ನಿಲ್ಲುತ್ತದೆ ಎಂಬುದಾಗಿ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ನಾಯಕಿ ಮಾಯಾವತಿ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ದೇಶದ ಸುರಕ್ಷೆಯ ವಿಷಯದಲ್ಲಿ ಕಾಂಗ್ರೆಸ್ -ಕಮ್ಯುನಿಸ್ಟರು ನಡೆಸುತ್ತಿರುವ ರಾಜಕೀಯಕ್ಕೆ ತನ್ನ ಬೆಂಬಲ ಇಲ್ಲ ಎಂಬುದನ್ನು ಅವರು ವ್ಯಕ್ತಗೊಳಿಸಿದಂತಾಗಿದೆ.
ಗಡಿಯಲ್ಲಿ ಚೀನಾ ನಡೆಸುತ್ತಿರುವ ತಂಟೆಗೆ ಸಂಬಂಸಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ದಿನನಿತ್ಯ ಆರೋಪಗಳನ್ನು ಮಾಡುತ್ತಿರುವಾಗಲೇ, ಈ ವಿಷಯದಲ್ಲಿ ರಾಜಕೀಯ ಮಾಡುವುದು ದೇಶದ ಹಿತದೃಷ್ಟಿಯಿಂದ ಸಲ್ಲದು. ಇದು ಅತ್ಯಂತ ಗಂಭೀರ ವಿಷಯ ಎಂಬುದಾಗಿ ಮಾಯಾವತಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಮಾಯಾವತಿ ಅವರು ವಲಸೆ ಕಾರ್ಮಿಕರ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಲು ಯತ್ನಿಸಿದಾಗ ವಿರೋಸಿದ್ದರು. ಇಂತಹ ರಾಷ್ಟ್ರನಿಷ್ಠ ನಿಲುವು ತಳೆದಿರುವುದಕ್ಕಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರಿಂದ ಟೀಕೆಗೆ ತುತ್ತಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಇಂತಹ ವಿಷಯದಲ್ಲಿ ರಾಜಕೀಯ ಮಾಡುವುದರಿಂದ ಚೀನಾ ಪರಿಸ್ಥಿತಿಯ ದುರ್ಲಾಭವನ್ನು ಪಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ತನ್ನ ಪಕ್ಷ ಹಿಂದುಳಿದ ವರ್ಗಗಳ ಜನರು, ಆದಿವಾಸಿಗಳು ಮತ್ತು ಮತಾಂತರಗೊಂಡ ಅಲ್ಪಸಂಖ್ಯಾತರ ಹಿತಕ್ಕಾಗಿ ಕೆಲಸ ಮಾಡಲು ಸ್ಥಾಪಿತವಾದ ಪಕ್ಷ ಎಂದು ಹೇಳಿಕೊಂಡ ಅವರು, ಈ ಪಕ್ಷ ಕಾಂಗ್ರೆಸ್ ಅಕಾರದಲ್ಲಿದ್ದಾಗ ಸ್ಥಾಪನೆಗೊಂಡ ಪಕ್ಷವಾಗಿದೆ.ಕಾಂಗ್ರೆಸ್ ಹಿಂದುಳಿದ ವರ್ಗಗಳು ಮತ್ತು ಆದಿವಾಸಿಗಳ ಉನ್ನತಿಗಾಗಿ ಕೆಲಸ ಮಾಡಿದ್ದಿದ್ದೇ ಆದರೆ ನಾವು ಬಿಎಸ್ಪಿಯನ್ನು ಸ್ಥಾಪಿಸಬೇಕಾಗಿ ಬರುತ್ತಿರಲಿಲ್ಲ. ತನ್ನ ಪಕ್ಷ ಯಾರದೇ ಆಟಿಕೆಯ ವಸ್ತುವಾಗದು ಎಂಬುದಾಗಿ ತಾನು ಕಾಂಗ್ರೆಸ್ ಮತ್ತು ಬಿಜೆಪಿಗೆ ಹೇಳಬಯಸುತ್ತೇನೆ . ತನ್ನದು ರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರ ಪಕ್ಷ ಎಂದರು .
ವಲಸೆ ಕಾರ್ಮಿಕರ ಸಮಸ್ಯೆಗೆ ಕಾಂಗ್ರೆಸ್ಸೇ ಮೂಲಕಾರಣ
ದೇಶದಲ್ಲಿ ವಲಸೆ ಕಾರ್ಮಿಕರು ಹೊಟ್ಟೆಪಾಡಿಗಾಗಿ ಇತರ ರಾಜ್ಯಗಳಿಗೆ ಹೋಗಿದ್ದವರು ಕೋವಿಡ್-೧೯ರ ಆಪತ್ತಿನಿಂದಾಗಿ ತಮ್ಮ ಹುಟ್ಟೂರುಗಳಿಗೆ ಮರಳಲು ಮುಂದಾದರು.ಆದರೆ ಈ ವಲಸೆ ಕಾರ್ಮಿಕರು ಕಾಂಗ್ರೆಸ್ ಆಡಳಿತವಿದ್ದಾಗಲೇ ಇತರ ರಾಜ್ಯಗಳಿಗೆ ವಲಸೆ ಹೋದರು ಎಂಬುದನ್ನು ಗಮನಿಸಬೇಕು.ಕಾಂಗ್ರೆಸ್ ಈ ಬಡವರಿಗಾಗಿ ಏನಾದರೂ ಮಾಡಿದ್ದಿದ್ದರೆ ಇವರು ಉದ್ಯೋಗ ಅರಸಿ ಇತರ ರಾಜ್ಯಗಳಿಗೆ ಹೋಗುವ ಅಗತ್ಯ ಬರುತ್ತಿತ್ತೇ ಎಂಬ ಗಂಭೀರ ಪ್ರಶ್ನೆಯನ್ನು ಮುಂದಿಟ್ಟ ಮಾಯಾವತಿ ಈ ಮೂಲಕ ದೇಶದಲ್ಲಿ ವಲಸೆ ಕಾರ್ಮಿಕರ ಸಮಸ್ಯೆಯ ಮೂಲಕಾರಣವೇ ಕಾಂಗ್ರೆಸ್ ಎಂದು ಒತ್ತಿ ಹೇಳಿದರು.ಬಿಜೆಪಿ ಕಾಂಗ್ರೆಸ್‌ನ ತಪ್ಪನ್ನು ಮಾಡಬಾರದು. ಭಾರತವನ್ನು ‘ಆತ್ಮನಿರ್ಭರ ’ವನ್ನಾಗಿಸಲು ಕಠಿಣವಾಗಿ ಶ್ರಮಿಸಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here